ಯತ್ನಾಳ್‌ಗೆ ಶಾಕ್ – ಕೇಂದ್ರ ಬಿಜೆಪಿ ಶಿಸ್ತುಸಮಿತಿಯಿಂದ ಶೋಕಾಸ್ ನೋಟಿಸ್

Public TV
2 Min Read

– 10 ದಿನಗಳ ಒಳಗೆ ಸ್ಪಷ್ಟನೆ ನೀಡುವಂತೆ ಉಲ್ಲೇಖ
– ನೋಟಿಸ್‌ಗೆ ಉತ್ತರಿಸುತ್ತೇನೆ ಎಂದ ಯತ್ನಾಳ್

ಬೆಂಗಳೂರು: ಪದೇಪದೇ ಪಕ್ಷದ ನಾಯಕತ್ವದ ಕುರಿತು ಮುಜುಗರ ತರುವ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಕೇಂದ್ರ ಬಿಜೆಪಿ ಶಿಸ್ತುಸಮಿತಿ (Central BJP Disciplinary Committee) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಈ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಹತ್ತು ದಿನಗಳೊಳಗೆ ಸ್ಪಷ್ಟೀಕರಣ ಕೊಡದಿದ್ದಲ್ಲಿ ನಿಮ್ಮ ತಪ್ಪು ನೀವೇ ಒಪ್ಪಿಕೊಂಡಂತೆ. ನಾವು ಕ್ರಮಕ್ಕೆ ಮುಂದಾಗಲು ನಿಮ್ಮ ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ. ಈ ಹಿಂದೆಯೂ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ತಪ್ಪು ಸರಿಪಡಿಸಿಕೊಳ್ಳೋದಾಗಿ ಭರವಸೆ ಕೊಟ್ಟಿದ್ದಿರಿ. ಆದರೆ ಯಾವುದೂ ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇಂದು ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಸಾವು – ಜೀಪ್‌ ಚಾಲಕನ ವಿರುದ್ಧ FIR

ಹೈಕಮಾಂಡ್ ನಮ್ಮ ಪರ ಇದೆ ಎನ್ನುತ್ತಿದ್ದ ಯತ್ನಾಳ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಸಾಧಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳ ಕುರಿತು ಹೈಕಮಾಂಡ್ ಗರಂ ಆಗಿದೆ. ಇದೀಗ ಶೋಕಾಸ್ ನೊಟೀಸ್ (Show Cause Notice) ಜಾರಿಯಾದ ಹಿನ್ನೆಲೆ ಯತ್ನಾಳ್ ಶೋಕಾಸ್ ನೊಟೀಸ್‌ಗೆ ಉತ್ತರ ಕೊಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಉತ್ತರ ಕೊಡುತ್ತೇನೆ. ಹಾಗೆಯೇ ರಾಜ್ಯ ಬಿಜೆಪಿಯ ವಸ್ತುಸ್ಥಿತಿಯನ್ನೂ ವರಿಷ್ಠರಿಗೆ ತಿಳಿಸೋದಾಗಿ ಯತ್ನಾಳ್ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರೋಪಿ ದರ್ಶನ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ – ಫೋಟೋ ವೈರಲ್‌

ಇನ್ನು ಸೋಮವಾರ ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರಿಗೆ ವಕ್ಫ್ ವಿರೋಧಿ ಜನಜಾಗೃತಿ ವರದಿ ಸಲ್ಲಿಸುವ ಸಲುವಾಗಿ ಭಾನುವಾರವೇ ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ಇಂದು (ಸೋಮವಾರ) ಉಳಿದ ರೆಬೆಲ್ ನಾಯಕರು ಯತ್ನಾಳ್‌ರನ್ನು ಕೂಡಿಕೊಳ್ಳಲಿದ್ದಾರೆ.‌ ಇದನ್ನೂ ಓದಿ: ಕರುನಾಡಿಗೂ ತಟ್ಟಿದ ಚಂಡಮಾರುತದ ಬಿಸಿ – ಈ ಜಿಲ್ಲೆಗಳಲ್ಲಿಂದು ಶಾಲಾ, ಕಾಲೇಜುಗಳಿಗೆ ರಜೆ

Share This Article