ಖ್ಯಾತ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ

By
1 Min Read

ಹೆಸರಾಂತ ಸಂಗೀತ ಸಂಯೋಜಕ, ಗಾಯಕ ಪಂಜಾಬಿನ (Punjab) ಬಂಟಿ ಬೈನ್ಸ್ (Bunty Bains) ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ನಿನ್ನೆಯಷ್ಟೇ ಈ ಘಟನೆ ನಡೆದಿದ್ದು, ಮೊಹಾಲಿ ರೆಸ್ಟೋರೆಂಟ್ ನಲ್ಲಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಅದೃಷ್ಟವಶಾತ್‍ ಬಂಟಿಗೆ ಯಾವುದೇ ಅಪಾಯವಾಗಿಲ್ಲ. ಅವರಿಗೆ ಯಾವುದೇ ಗುಂಡು ತಗುಲಿಲ್ಲ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳು ವರದಿ ಮಾಡಿದಂತೆ ವ್ಯಕ್ತಿಯೊಬ್ಬ ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದನಂತೆ. ಬಂಟಿ ದುಡ್ಡನ್ನು ಕೊಡದೇ ಇರುವ ಕಾರಣಕ್ಕಾಗಿ ಈ ಶೂಟೌಟ್ ನಡೆದಿದೆ ಎಂದು ಹೇಳಲಾಗುತ್ತಿದೆ.

 

ಗ್ಯಾಂಗ್ ಸ್ಟರ್ ಲಕ್ಕಿ ಪಾಟಿಯಲ್ ಹೆಸರಿನಲ್ಲಿ ಈ ಕೊಲೆ ಬೆದರಿಕೆ ಬಂದಿದ್ದು, ಕೆನಡಾದಿಂದ ಅವನು ಕಾರ್ಯನಿರ್ವಹಿಸುತ್ತಿದ್ದಾನೆಂದು ವರದಿ ಆಗಿದೆ. ಜೊತೆಗೆ ಕುಖ್ಯಾತಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆಗೆ ಈತನ ಸಂಪರ್ಕವಿದೆ ಅಂತೆ.

Share This Article