ಜನಾಂಗೀಯ ದಾಳಿ – ಫ್ರಾನ್ಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ, ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ

Public TV
1 Min Read

ಪ್ಯಾರಿಸ್: ಕುರ್ದಿಶ್ ಸಮುದಾಯದ ಮೇಲೆ ನಡೆದ ಶೂಟೌಟ್, ಜನಾಂಗೀಯ ದಾಳಿ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಪ್ಯಾರಿಸ್‍ನಲ್ಲಿ (Paris) ವ್ಯಾಪಕ ಪ್ರತಿಭಟನೆಗಳು (Protest) ನಡೆಯುತ್ತಿವೆ.

ಡಿ.23 ರಂದು ನಡೆದ ಗುಂಡಿನ ಚಕಮಕಿಯನ್ನು ವಿರೋಧಿಸಿ ಫ್ರಾನ್ಸ್‌ನಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದೀಗ ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ವಾಹನಗಳನ್ನು ಉರುಳಿಸಿ, ಕೆಲ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರ ಮೇಲೂ ಹಲ್ಲೆಗಳು ನಡೆದಿದ್ದು, ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ರಿಪಬ್ಲಿಕ್ ಸ್ಕ್ವೇರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಾಕಲಾಗಿದ್ದು, ಮಳಿಗೆಗಳ ಕಿಟಕಿಗಳನ್ನು ಹಾನಿಗೀಡು ಮಾಡಲಾಗಿದೆ. ಹಿಂಸಾಚಾರದ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಬಿತ್ತು ಬರೋಬ್ಬರಿ 16 ಸಾವಿರ ರೂ. ದಂಡ

ಘಟನೆಯೇನು?: ಸಾಂಸ್ಕೃತಿಕ ಕೇಂದ್ರದ ಮೇಲೆ ಗನ್ ಮ್ಯಾನ್ ಓರ್ವ ಶುಕ್ರವಾರದಂದು ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಮೂವರು ಕುರ್ದಿಗಳು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ 64 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಶಾಲೆಯ ಕಬ್ಬಿಣದ ಗೇಟ್‌ ಬಿದ್ದು 8ರ ಬಾಲಕಿ ಸಾವು

ಬಂಧಿತ ವ್ಯಕ್ತಿ ತನ್ನನ್ನು ತಾನು ಜನಾಂಗೀಯ ದ್ವೇಷಿ ಹಾಗೂ ವಿದೇಶಿಗರನ್ನು ದ್ವೇಷಿಸುವವ ಎಂದು ಹೇಳಿಕೊಂಡಿದ್ದ. ಜೊತೆಗೆ ಈ ದಾಳಿಯನ್ನು ನಡೆಸಲು 6 ವರ್ಷಗಳ ಹಿಂದೆ ಶಂಕಿತನ ಮನೆಯಲ್ಲಿ ನಡೆದ ಕಳ್ಳತನವೇ ಕಾರಣವಾಗಿದೆ. ಆದರೆ ಆರೋಗ್ಯದ ಕಾರಣದಿಂದಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳಿಯ ಪೊಲೀಸರು ಹೇಳಿದ್ದಾರೆ. ಈ ಘಟನೆಯ ಬೆನ್ನಲ್ಲೇ ಪ್ಯಾರಿಸ್‍ನಲ್ಲಿ ಶಾಂತಿ ಕದಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *