ಚಿತ್ರೀಕರಣದಲ್ಲಿ ಅವಘಡ: ನಟಿ ಸಮಂತಾ ಕೈಗೆ ಗಾಯ

Public TV
1 Min Read

ತೆಲುಗು ಸಿನಿಮಾ ರಂಗದ ಹೆಸರಾಂತ ನಟಿ ಸಮಂತಾ ಕೈಗೆ ಗಾಯಗಳಾಗಿವೆ. ಗಾಯಗೊಂಡ (injury) ಕೈಗಳ ಚಿತ್ರವನ್ನು ಸಮಂತಾ (Samantha) ಪೋಸ್ಟ್ ಮಾಡಿದ್ದು, ಇದು ಚಿತ್ರೀಕರಣದಲ್ಲಿ ನಡೆದ ಘಟನೆಯಿಂದ ಆದದ್ದು ಎಂದು ಬರೆದುಕೊಂಡಿದ್ದಾರೆ. ರಕ್ತಸಿಕ್ತ ಬೆರಳುಗಳನ್ನು ಕಂಡು ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಸಮಂತಾ ಸದ್ಯ ಹಿಂದಿಯಲ್ಲಿ ತಯಾರಾಗುತ್ತಿರುವ ‘ಸಿಟಾಡೆಲ್’ (Citadel) ವೆಬ್ ಸಿರೀಸ್ ನಲ್ಲಿ (Web Series) ನಟಿಸುತ್ತಿದ್ದಾರೆ. ಮೂಲ ಇದು ಇಂಗ್ಲಿಷಿನಲ್ಲಿ ಬರುತ್ತಿದ್ದು, ಅದನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಈ ವೆಬ್ ಸರಣಿಯಲ್ಲಿ ಸಮಂತಾ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಇದೇ ಚಿತ್ರೀಕರಣದಲ್ಲಿ ಸಮಯದಲ್ಲಿ ಸಮಂತಾ ಗಾಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ರಾಧಾ ಕೃಷ್ಣ’ ಸೀರಿಯಲ್ ನಟಿ

ಸಿಟಾಡೆಲ್ ಸಾಹಸ ಪ್ರಧಾನ ವೆಬ್ ಸರಣಿ. ಹೇರಳವಾಗಿ ಆ್ಯಕ್ಷನ್ ಸನ್ನಿವೇಶಗಳು ಅದರಲ್ಲಿ ಇವೆಯಂತೆ. ಇಂತಹ ದೃಶ್ಯಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಸಮಂತಾರ ಬೆರಳುಗಳಿಗೆ ಗಾಯಗಳಾಗಿವೆ. ಕೂಡಲೇ ಚಿಕಿತ್ಸೆ ಪಡೆದುಕೊಂಡಿರುವ ಅವರು, ನಂತರ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡರು ಎಂದು ಹೇಳಲಾಗುತ್ತಿದೆ. ಬೆರಳುಗಳು ನೋವಾಗಿದ್ದರೂ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಕ್ಕೆ ಇಡೀ ಚಿತ್ರತಂಡ ಅವರನ್ನು ಅಭಿನಂದಿಸಿದೆ.

ಹಲವು ದಿನಗಳಿಂದ ಸಮಂತಾ ಚಿತ್ರೀಕರಣದಲ್ಲಿ ಭಾಗಿಯಾಗಿರಲಿಲ್ಲ. ಅನಾರೋಗ್ಯದ ಕಾರಣದಿಂದಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಂತರ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಆರೋಗ್ಯ ಸಮಸ್ಯೆಯಿಂದ ಅವರು ಪಾರಾಗಿದ್ದು, ಮತ್ತೆ ವರ್ಕೌಟ್ ಕೂಡ ನಡೆಸಿದಿದ್ದಾರೆ. ಹಾಗಾಗಿ ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಳ್ಳಲು ಅವರು ಸಮ್ಮತಿ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *