ದಾವಣಗೆರೆ: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಮಾಡೋರನ್ನ ಗುಂಡಿಕ್ಕಿ ಕೊಲ್ಲಬೇಕು ಎಂದು ಮಾಜಿ ಸಚಿವ ಎಂ.ಪಿ ರೇಣುಕಚಾರ್ಯ (M.P Renukacharya) ಆಕ್ರೋಶ ಹೊರಹಾಕಿದ್ದಾರೆ.
ಹೊನ್ನಾಳಿಯಲ್ಲಿ (Honnali) ಧರ್ಮಸ್ಥಳದ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋರನ್ನು ಗುಂಡಿಕ್ಕಿ ಕೊಲ್ಲಬೇಕು. ಯಾರೋ ಒಬ್ಬ ಅನಾಮಿಕ ದೂರು ನೀಡಿದ್ದಾನೆ ಅಂತ ಎಸ್‍ಐಟಿ (SIT) ರಚನೆ ಮಾಡಿದ್ದಾರೆ. ಸರ್ಕಾರ ಅನಗತ್ಯವಾಗಿ ಎಸ್‍ಐಟಿ ರಚನೆ ಮಾಡಿದೆ. ಸುಜಾತಾ ಭಟ್‍ಗೆ ಮಗಳೇ ಇಲ್ಲ ಅಂತಿದ್ದಾರೆ, ಅವರು ನೀಡಿದ ದೂರು ಫೇಕ್ ಅಂತ ಗೊತ್ತಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ | ರಾಜ್ಯಾದ್ಯಂತ ಪ್ರತಿಭಟನೆ – ವಿಧಾನಸೌಧದಲ್ಲಿ ಹೆಣ ಇದೆ ಅಂದ್ರೆ ಅಗೆಯುತ್ತಾರಾ? ಭಕ್ತರ ಆಕ್ರೋಶ
ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅನಾಮಿಕ ದೂರುದಾರನ ಪೂರ್ವಾಪರ ವಿಚಾರಣೆ ಮಾಡಬೇಕಿತ್ತು. ಈವರೆಗೂ ಎಸ್‍ಐಟಿ ಶೋಧ ಕಾರ್ಯಾಚರಣೆಯಲ್ಲಿ ಏನು ಸಿಕ್ಕಿಲ್ಲ. ಎಸ್‍ಐಟಿ ತನಿಖೆಯಲ್ಲಿ ಸತ್ಯಾಂಶ ಹೊರ ಬರಬೇಕು. ಅಪಪ್ರಚಾರ ಮಾಡಿದವರ ಕುರಿತು ತನಿಖೆ ಆಗಬೇಕು, ಅವರ ಹಿನ್ನೆಲೆ ಏನು ಎಂದು ತನಿಖೆ ಆಗಬೇಕು. ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಅನಾಮಿಕ ವ್ಯಕ್ತಿಗೆ ಮಂಪರು ಪರೀಕ್ಷೆ ಮಾಡಬೇಕು. ಸುಳ್ಳು ಹೇಳಿದ ಆತನನ್ನು ಗಲ್ಲಿಗೆ ಏರಿಸಬೇಕು ಎಂದು ಕಿಡಿಕಾರಿದ್ದಾರೆ.
ಯಾವನೋ ಒಬ್ಬ ಹೆಗಡೆಯವರು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದಾನೆ. ಅವನು ಏನಾದರೂ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದಾನಾ? ಅವರ ಸಮಾಜ ಸೇವೆಯನ್ನು ಕಂಡು ಮೋದಿಯವರು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್; 16 ಸ್ಪಾಟ್‌ಗಳಲ್ಲಿ ಸಿಗದ ಕುರುಹು – ದೂರುದಾರನ ಮಂಪರು ಪರೀಕ್ಷೆಗೆ ಎಸ್‌ಐಟಿ ಚಿಂತನೆ