ಜೀ5 ವೆಬ್ ಸರಣಿಗಳಿಗೆ ವೇದಿಕೆ ಸೃಷ್ಟಿಸಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಈಗ ‘ಶೋಧ’ (Shodha) ಹೆಸರಿನ ವೆಬ್ ಸಿರೀಸ್ ರಿಲೀಸ್ ಮಾಡಲು ರೆಡಿ ಆಗಿದೆ. ಈ ಸರಣಿಯ ಟ್ರೇಲರ್‌ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ತಿಂಗಳ 29 ರಿಂದ ಶೋಧ zee5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಈ ಕುರಿತು ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜೀ5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮಲು ಮಾತನಾಡಿ, zee5 ಈ ಮೊದಲು ಒಂದೇ ಒಟಿಟಿ ಫ್ಲಾಟ್‌ಫಾರ್ಮ್ ಆಗಿತ್ತು. ಈಗ ಭಾಷೆಗಾಗಿ ಒಂದು ವಿಶೇಷ ಒಟಿಟಿ ಶುರು ಮಾಡಿದ್ದೇವೆ. Zee5 ಈಗ ಕನ್ನಡ zee5 ಆಗಿದೆ. ಈಗ ಇದರ ಜೊತೆಗೆ ವೆಬ್ ಸಿರೀಸ್ ಶುರು ಮಾಡಿದ್ದೇವೆ. ಇದು zee5 ಮೊದಲ ಪ್ರಯತ್ನ. ಮಿನಿ ಸಿರೀಸ್ ಹಾಗೂ ಮೈಕ್ರೋ ಸಿರೀಸ್ ಎಂಬುದನ್ನು ಶುರು ಮಾಡಿದ್ದೇವೆ. ಮಿನಿ ಮತ್ತು ಮೆಗಾ ಸಿರೀಸ್ ಇದೆ. ಮಿನಿ ಸೀರಿಸ್ ಮೊದಲ ಹೆಜ್ಜೆಯೇ ಅಯ್ಯನ ಮನೆ. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಸಕ್ಸಸ್ ಮುಂದಿನ ಹೆಜ್ಜೆಯೇ ಶೋಧ. ಶೋಧ ಶುರು ಮಾಡಿದಾಗ ಕೆಆರ್ ಜಿಯವರು ಸಾಥ್ ಕೊಟ್ಟರು. ಇದರ ಮುಂದುವರೆದ ಭಾಗವಾಗಿ ಪಿಆರ್‌ಕೆ ಪ್ರೊಡಕ್ಷನ್ ಹಾಗೂ ತರುಣ್ ಸುಧೀರ್ ಪ್ರೊಡಕ್ಷನ್ ಸೇರಿದಂತೆ ಹಲವು ಪ್ರೊಡಕ್ಷನ್ ಜೊತೆ ಕೈ ಜೋಡಿಸಿದ್ದೇವೆ. ಈ ಸಿರೀಸ್ ಪ್ರಪಂಚವೇ ವಿಭಿನ್ನ ಎಂದರು. ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ – ಆ.23 ಕ್ಕೆ ವಿಚಾರಣೆ ಮುಂದೂಡಿಕೆ
ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಮಾತನಾಡಿ, ಅಯ್ಯನ ಮನೆ ಸಕ್ಸಸ್ ಬಳಿ ಪ್ರದೀಪ್ ಬಂದು ವೆಬ್ ಸಿರೀಸ್ ಐಡಿ ಇದೆ ಮಾಡೋಣಾ ಎಂದು ಕೇಳಿದರು. ಅದಕ್ಕೆ ಫ್ರೆಶ್ ರೈಟಿಂಗ್ ಬರಬೇಕು. ಸುಹಾಸ್ ಹಿಂದಿಯಲ್ಲಿ ಫರ್ಜಿ ವೆಬ್ ಸಿರೀಸ್, ಫ್ಯಾಮಿಲಿ ಮ್ಯಾನ್ 2, 3 ವೆಬ್ ಸರಣಿಗೆ ರೈಟರ್ ಆಗಿ ಕೆಲಸ ಮಾಡಿದ್ದರು. ಅವರನ್ನು ತಂದೆವು. ಬಳಿಕ ಸುನಿಲ್ ಮೈಸೂರು ಬಂದರು. ಹೀಗೆ ಒಬೊಬ್ಬರೇ ತಂಡ ಸೇರಿಕೊಂಡರು. ತುಂಬಾ ಜನ ಸೇರಿಕೊಂಡು ವೆಬ್ ಸಿರೀಸ್ ಮಾಡಿದ್ದೇವೆ. ಟ್ರೇಲರ್ ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಇದೇ ತಿಂಗಳ 29ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದರು.
ನಟ ಪವನ್ ಕುಮಾರ್ ಮಾತನಾಡಿ, ನಾವು ಹಿಂದಿಯಲ್ಲಿ ಸಿರೀಸ್ ಮಾಡಿದ್ದೆ. ಕನ್ನಡದಲ್ಲಿಯೂ ಮಾಡಬೇಕು ಎಂದಾಗ ರಿಜೆಕ್ಟ್ ಆಗುತ್ತಿತ್ತು. zee5ನಲ್ಲಿ ವೆಬ್ ಸಿರೀಸ್ ಮಾಡುತ್ತಿದ್ದಾರೆ ಎಂದಾಗ ಖುಷಿಯಾಯ್ತು. ಶೋಧದಲ್ಲಿ ಆಕ್ಟ್ ಮಾಡ್ತೀಯಾ ಎಂದು ಕೇಳಿದರು. ಕಥೆ ಕೇಳಿದಾಗ ನಾನು ಆಟವಾಡಲು ಅವಕಾಶವಿದೆ ಎಂದು ತಿಳಿಯಿತು. ವೆಬ್ ಸಿರೀಸ್‌ನಲ್ಲಿ ಒಳ್ಳೊಳ್ಳೆ ಕಥೆಗಳನ್ನು ಹೇಳಬಹುದು. ತುಂಬಾ ಜನ ಡೈರೆಕ್ಟರ್ ಹಾಗೂ ರೈಟರ್ಸ್‌ಗೆ ದೊಡ್ಡ zee5 ಫ್ಲಾಟ್‌ಫಾರ್ಮ್ ಆಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: `ವೇಷಗಳು’ ಚಿತ್ರದ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ ಶರತ್ ಲೋಹಿತಾಶ್ವ
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನೀಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ‘ಶೋಧ’ಕ್ಕೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಗಮನ ಸೆಳೆದವರು ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ರವಿಕುಮಾರ್, ಅರುಣ್ ಸಾಗರ್ ಮತ್ತು ಅನುಷಾ ರಂಗನಾಥ್ ತಾರಾಬಳಗದಲ್ಲಿದ್ದಾರೆ. ಸಪ್ತಮಿ ಗೌಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದು, ಆರು ಎಪಿಸೋಡ್‌ಗಳುಳ್ಳ ಸಖತ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಳೆಯೇ ‘ಶೋಧ’. ಆಗಸ್ಟ್ 29ರಿಂದ ಜೀ5 ಒಟಿಟಿಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.