ಅಜಿತ್ ಪವಾರ್ ಮಹಾರಾಷ್ಟ್ರದ ಜನರ ಸೇವೆಗೆ ಮುಂಚೂಣಿಯಲ್ಲಿದ್ದರು: ಮೋದಿ ಸಂತಾಪ

1 Min Read

ನವದೆಹಲಿ: ಅಜಿತ್ ಪವಾರ್ (Ajit Pawar) ಮಹಾರಾಷ್ಟ್ರದ ಜನರ ಸೇವೆಗೆ ಸದಾ ಮುಂಚೂಣಿಯಲ್ಲಿದ್ದರು ಎಂದು ಮಹಾರಾಷ್ಟ್ರ (Maharashtra) ಡಿಸಿಎಂ ದುರ್ಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದಾರೆ.

ಮಹಾರಾಷ್ಟ್ರದ ಬಾರಮತಿಯಲ್ಲಿ ನಡೆದ ವಿಮಾನ ಪತನದಲ್ಲಿ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಐವರು ದುರ್ಮರಣ ಹೊಂದಿದ್ದಾರೆ. ದುರಂತ ಹಿನ್ನೆಲೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮೋದಿ, ಅಜಿತ್ ಪವಾರ್ ನಿಧನಕ್ಕೆ ಬೇಸರಿಸಿದ್ದಾರೆ.

ಎಕ್ಸ್‌ನಲ್ಲಿ ಏನಿದೆ?
ಅಜಿತ್ ಪವಾರ್ ಜನ ನಾಯಕರಾಗಿದ್ದರು. ತಳಮಟ್ಟದ ಸಂಪರ್ಕ ಹೊಂದಿದ್ದರು. ಕಠಿಣ ಪರಿಶ್ರಮ ವ್ಯಕ್ತಿತ್ವ ಅವರದಾಗಿತ್ತು. ಆಡಳಿತಾತ್ಮಕ ವಿಷಯಗಳ ಬಗ್ಗೆ ಅಜಿತ್ ಪವಾರ್ ತಿಳುವಳಿಕೆ ಹಾಗೂ ಬಡವರು ಮತ್ತು ದೀನದಲಿತರ ಸಬಲೀಕರಣದ ಬಗ್ಗೆ ಅವರಿಗಿದ್ದ ಉತ್ಸಾಹ ಗಮನಾರ್ಹವಾದದ್ದು. ಅವರ ಅಕಾಲಿಕ ನಿಧನ ಆಘಾತಕಾರಿ ಮತ್ತು ದುಃಖಕರವಾಗಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Share This Article