ಯುಗಾದಿಗೆ ಊರಿಗೆ ಹೊರಟವರಿಗೆ ಶಾಕ್ – ದರ ಹೆಚ್ಚಿಸಿದ ಖಾಸಗಿ ಬಸ್‌ಗಳು, ಎಲ್ಲಿಗೆ ಎಷ್ಟು?

1 Min Read

ಬೆಂಗಳೂರು: ಯುಗಾದಿ ಹಬ್ಬಕ್ಕೆ (Ugadi Festival) ಊರಿಗೆ ಹೊರಟವರಿಗೆ ದರ ಏರಿಕೆ ಬಿಸಿ ಮುಟ್ಟಿದೆ. ಹಬ್ಬದ ಹಿನ್ನೆಲೆ ಖಾಸಗಿ ಬಸ್ ಏಜೆನ್ಸಿಗಳು ಟಿಕೆಟ್ ದರ ಹೆಚ್ಚಿಸಿದ್ದು (Ticket Price Hike), ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.

ಯುಗಾದಿ ಮತ್ತು ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಹೆಚ್ಚಳ ಮಾಡಿದ್ದಾರೆ. ಬೆಂಗಳೂರು – ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ದರ ಏರಿಕೆ ಮಾಡಲಾಗಿದೆ.

ಈಗ ದರ ಎಷ್ಟಿದೆ?
ಬೆಂಗಳೂರು – ಮಂಗಳೂರು:
600 ರೂ. – 2,999 ರೂ.

ಬೆಂಗಳೂರು – ಧಾರವಾಡ/ಹುಬ್ಬಳ್ಳಿ:
400-1,300 ರೂ. – 4,500 ರೂ.

ಬೆಂಗಳೂರು – ಶಿವಮೊಗ್ಗ:
400 ರೂ. – 2,799 ರೂ.

ಬೆಂಗಳೂರು – ಧರ್ಮಸ್ಥಳ:
500 ರೂ. – 3,600 ರೂ

ಬೆಂಗಳೂರು-ಮೈಸೂರು:
350 ರೂ. – 2,500 ರೂ.

Share This Article