ಹೊಸ ವಾಹನ ಖರೀದಿದಾರರಿಗೆ ಶಾಕ್ – ಏಪ್ರಿಲ್‌ನಿಂದ ಆಟೋ, ಕಾರು, ಬೈಕ್ ದರ ಏರಿಕೆ

Public TV
2 Min Read

– ಉಕ್ಕಿನ ದರ ಏರಿಕೆ ಎಫೆಕ್ಟ್, ವಾಹನಗಳ ಬೆಲೆ ದುಬಾರಿ

ಬೆಂಗಳೂರು: ದಿನ ಕಳೆದಂತೆ ಒಂದೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಿರುತ್ತದೆ. ಇದೀಗ ವಾಹನಗಳ ಸರದಿ. ಏಪ್ರಿಲ್ ತಿಂಗಳಿಂದ ಹೊಸ ವಾಹನಗಳ (Vehicles) ಬೆಲೆ ಪ್ರತಿ ವಾಹನದ ಮೇಲೆ ಶೇ.4ರಷ್ಟು ದರ ಏರಿಕೆಯಾಗಲಿದ್ದು, ತಯಾರಿಕಾ ಕಂಪನಿಗಳು ಹೊಸ ವಾಹನಗಳ ದರ ಏರಿಕೆ (Price Hike) ಬಗ್ಗೆ ಮಾಹಿತಿ ನೀಡಿವೆ.

ಉಕ್ಕಿನ ದರ ಹೆಚ್ಚಳ, ವಿದೇಶಿ ಅಮದು, ತಯಾರಿಕಾ ವೆಚ್ಚ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಇದೇ ಏಪ್ರಿಲ್‌ನಿಂದಲೇ ಕಾರು, ಬೈಕ್, ಆಟೋ ದರ 4%ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲಾ ವಾಹನ ತಯಾರಿಕಾ ಕಂಪನಿಗಳು ದರ ಏರಿಕೆ ಮಾಡಲು ತೀರ್ಮಾನ ಮಾಡಿದೆ. 2 ವೀಲರ್ ಮೇಲೆ 2% ನಷ್ಟು, ಕಾರಿನ ಮೇಲೆ 4%ರಷ್ಟು ದರ ಏರಿಕೆಯಾಗಲಿದೆ. ಒಂದು ಲಕ್ಷ ರೂ. 2 ವೀಲರ್ ಖರೀದಿ ಮಾಡಿದರೆ 2 ರಿಂದ 3 ಸಾವಿರ, ಎರಡು ಲಕ್ಷ ರೂ. ಮೌಲ್ಯದ ವಾಹನ ಖರೀದಿ ಮಾಡಿದರೆ 5 ರಿಂದ 6 ಸಾವಿರ ಹೀಗೆ ವಾಹನಗಳ ಬೆಲೆ ಹೆಚ್ಚಾದಂತೆ ದರವು ಏರಿಕೆ ಆಗಲಿದೆ. ಇದನ್ನೂ ಓದಿ:  ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್‌ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!

ಇನ್ನೂ ಐದು ಲಕ್ಷ ರೂ. ಇರುವ ಎಕ್ಸ್ ಷೋ ರೂಂ ಕಾರಿನ ಮೇಲೆ 15 ರಿಂದ 20 ಸಾವಿರ ರೂ.ವರೆಗೆ ದರ ಏರಿಕೆ ಆಗಲಿದೆ. 10 ಲಕ್ಷ ರೂ. ಮೌಲ್ಯದ ಕಾರು ಖರೀದಿ ಮಾಡಿದರೆ 30 ರಿಂದ 40 ಸಾವಿರ ರೂ.ವರೆಗೆ ಏರಿಕೆ ಆಗಲಿದೆ. ಇದು ಕೇವಲ ಕೆಲ ಕಾರುಗಳಿಗೆ ಮಾತ್ರ ಸೀಮಿತ ಅಲ್ಲ. ಸಾಮಾನ್ಯ ಮಧ್ಯಮ ವರ್ಗ ಬಳಸುವ ಕಾರಿನಿಂದ ಹಿಡಿದು ಕೋಟಿ ಬೆಲೆಯ ಕಾರಿನವರೆಗೂ ಅನುಗುಣವಾಗಿ ದರ ಏರಿಕೆಯಾಗಲಿದೆ. ಇದು ಹೆಚ್ಚಾಗಿ ಕಾರು, ಆಟೋ ನಂಬಿ ಜೀವನ ಸಾಗಿಸುವ ಚಾಲಕರ ಮೇಲೆ ಹೆಚ್ಚು ಹೊರೆಯಾಗುವ ಸಾಧ್ಯತೆ ಇದೆ. ಜೊತೆಗೆ ಕನಸಿನ ಕಾರು ಖರೀದಿ ಮಾಡಬೇಕು ಎಂಬ ಮಧ್ಯಮ ವರ್ಗದ ಜನರ ಕನಸು ಕೂಡ ಕೊಂಚ ದುಬಾರಿಯಾಗಲಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ

Share This Article