ಬೆಂಗಳೂರು ವಾಹನ ಸವಾರರಿಗೆ ಶಾಕ್ – ಇನ್ಮುಂದೆ ರಸ್ತೆಬದಿ ಗಾಡಿ ನಿಲ್ಲಿಸೋಕೆ ಕಟ್ಬೇಕು ದುಡ್ಡು!

1 Min Read

ಬೆಂಗಳೂರು: ಜಿಬಿಎ (GBA) ಇದೀಗ ವಾಹನ ಸವಾರರಿಗೆ ಶಾಕ್ ನೀಡಿದೆ. ಇನ್ಮುಂದೆ ರಸ್ತೆಬದಿ ಗಾಡಿ ನಿಲ್ಲಿಸಬೇಕೆಂದರೆ ದುಡ್ಡು ಪಾವತಿ ನಿಯಮ ಜಾರಿ ಮಾಡಿದೆ.

ನಗರದಲ್ಲಿ ರಸ್ತೆ ಬದಿ ಖಾಲಿ ಜಾಗ ಇದೆ ಎಂದು ಸಿಕ್ಕ ಸಿಕ್ಕ ಕಡೆ ವಾಹನ ನಿಲ್ಲಿಸಿ ಹೋಗುವವರು ಜಾಸ್ತಿ. ಆದರೆ ಇನ್ಮುಂದೆ ಇದಕ್ಕೆಲ್ಲ ಬ್ರೇಕ್ ಹಾಕಲು ಜಿಬಿಎ ಮುಂದಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಕಳಿಸಿದ್ದ 22 ಮಸೂದೆಗಳ ಪೈಕಿ 19ಕ್ಕೆ ರಾಜ್ಯಪಾಲರ ಅಂಕಿತ

ಜಿಬಿಎನಿಂದಲೇ ಪೇ ಆಂಡ್ ಪಾರ್ಕಿಂಗ್ ರೂಲ್ಸ್ ಜಾರಿಯಾಗಿದ್ದು, ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ. ಶನಿವಾರ (ಜ.10) ಈ ಪಾರ್ಕಿಂಗ್ ವ್ಯವಸ್ಥೆಗಾಗಿ ಟೆಂಡರ್ ಕೂಡ ಕರೆಯಲಾಗಿದೆ ಎಂದು ಜಿಬಿಎ ಕಮೀಷನರ್ ಹೇಳಿದ್ದಾರೆ.

ಬೆಂಗಳೂರು ಸೆಂಟ್ರಲ್ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಕೂಡ ಪೂರ್ಣಗೊಂಡಿದ್ದು, ಕಮರ್ಷಿಯಲ್ ರೋಡ್, ಡಿಕೆನ್ಸನ್ ರೋಡ್, ಮಿಲ್ಲರ್ಸ್ ರೋಡ್ ಸೇರಿದಂತೆ ಹಲವಡೆ ಪೇ ಆಂಡ್ ಪಾರ್ಕ್ಗೆ ಜಾಗ ನಿಗದಿಯಾಗಿದೆ. ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ., ಹಾಗೂ ನಾಲ್ಕು ಚಕ್ರ ವಾಹಗಳಿಗೆ 30 ರೂ. ಸೇರಿದಂತೆ ತಿಂಗಳ ಪಾಸಿನ ವ್ಯವಸ್ಥೆಯೂ ಕೂಡ ಸಿಗಲಿದೆ.ಇದನ್ನೂ ಓದಿ: ಹಿಮಾಚಲ ಪ್ರದೇಶ | ಪ್ರಪಾತಕ್ಕೆ ಉರುಳಿದ ಬಸ್‌ – 8 ಪ್ರಯಾಣಿಕರು ದುರ್ಮರಣ

Share This Article