BBK 11: ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ- ಜೈಲಿಗಟ್ಟಿದ ಮನೆ ಮಂದಿ

Public TV
1 Min Read

‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ (Shobha Shetty) ಈ ವಾರದ ಕಳಪೆ (Kalape) ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಮನೆ ಮಂದಿಯೆಲ್ಲಾ ಸೇರಿ ಕಳಪೆ ಪಟ್ಟ ಕೊಟ್ಟಿರೋದು ಶೋಭಾಗೆ ಶಾಕ್ ಆಗಿದೆ. ಜೈಲು ಪಾಲಾಗಿದ್ದಕ್ಕೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

ಈ ವಾರ ನಿಮ್ಮ ಆಟದ ಪ್ರದರ್ಶನ ಕಡಿಮೆ ಎಂದೆನಿಸಿತು. ಅದಕ್ಕೆ ಕಳಪೆ ಪಟ್ಟ ಕೊಡುತ್ತಿದ್ದೇನೆ ಎಂದ ಧನರಾಜ್ ಮಾತಿಗೆ ಶೋಭಾ ಗರಂ ಆಗಿದ್ದಾರೆ. ನೀವ್ಯಾಕೆ ನನ್ನ ಟಾರ್ಗೆಟ್ ಮಾಡುತ್ತಿದ್ದೀರಾ? ಎಂದಿದ್ದಾರೆ. ಜೀವನದಲ್ಲಿ ಏನೇನೋ ಫೇಸ್ ಮಾಡಿದ್ದೇನೆ. ಇದು ಏನು ಅಲ್ಲ ನನಗೆ ಎಂದು ತಿರುಗೇಟು ನೀಡಿದ್ದಾರೆ ಶೋಭಾ. ಇಡೀ ಮನೆ ಅವರಿಗೆ ಕಳಪೆ ಕೊಟ್ಟಿರೋದು ಕೆಲ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

ಅಮ್ಮಾ ಇವತ್ತು ನಾನು ಜೈಲಿಗೆ ಹೋಗ್ತಾ ಇದ್ದೀನಿ. ಅದನ್ನು ನೋಡಿ ನೀವು ಅಳಬೇಡಿ ಎಂದು ಶೋಭಾ ಕಣ್ಣೀರಿಟ್ಟಿದ್ದಾರೆ. ಇತ್ತ ನನ್ನ ನಿರ್ಧಾರ ತಪ್ಪಾಗಿದ್ಯಾ ಎಂದು ಗೊಂದಲದಲ್ಲಿದ್ದ ಧನರಾಜ್‌ಗೆ ನಿಮ್ಮ ನಿರ್ಧಾರ ಸರಿಯಾಗಿದೆ ಎಂದು ರಜತ್ ಸಲಹೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಬೆಳ್ಳಗೆ ಇರೋದೆಲ್ಲ ಹಾಲಲ್ಲ ಎಂದು ಶೋಭಾಗೆ ಕುಟುಕಿದ್ದಾರೆ. ಎಲ್ಲರೂ ನನಗೆ ಕಳಪೆ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಶೋಭಾ ಜೈಲಿನಲ್ಲಿ ಗಳಗಳನೆ ಅತ್ತಿದ್ದಾರೆ.

ಇನ್ನೂ ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗಾರ್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

Share This Article