ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

Public TV
1 Min Read

ದೊಡ್ಮನೆಯ (Bigg Boss Kannada 11) ಆಟ ರೋಚಕ ತಿರುವುಗಳನ್ನು ಪಡೆದು 60ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath Kishen) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಮೇಲೆ ಆಟ ಇಂಟರೆಸ್ಟಿಂಗ್ ಆಗಿದೆ. ಇದೀಗ ಹನುಮಂತ ನಾಮಿನೇಟ್ ಮಾಡಿದ್ದಕ್ಕೆ ಫೈರ್ ಲೇಡಿ ಶೋಭಾ ಶೆಟ್ಟಿ ಗರಂ ಆಗಿದ್ದಾರೆ. ಈ ವೇಳೆ, ಹನುಮಂತ, ಶೋಭಾ, ಮಂಜು ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ, ಶೋಭಾ ಶೆಟ್ಟಿ ಹೆಸರನ್ನು ಹನುಮಂತ ಸೂಚಿಸಿದರು. ಅದಕ್ಕೆ ಕೊಟ್ಟ ಕಾರಣ ಶೋಭಾಗೆ ಸಿಟ್ಟು ತರಿಸಿದೆ. ನೇರವಾಗಿ ಶೋಭಾ ಶೆಟ್ಟಿಗೆ ನಿಮ್ಮ ಕ್ಯಾಪ್ಟನ್ಸಿ ನನಗೆ ಇಷ್ಟ ಆಗಿಲ್ಲ ಎಂದಿದ್ದಾರೆ. ನಿಮ್ಮ ಬುದ್ದಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ. ಎಲ್ಲಾ ರಜತ್ ಮತ್ತು ಮಂಜು ಪ್ಲ್ಯಾನ್ ಮಾಡಿದಂತೆ, ಆಟ ಆಡಿದ್ದೇವೆ ಎಂದು ಹನುಮಂತ (Hanumantha) ಹೇಳಿದ್ದಾರೆ. ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿತ್ತು ಎಂದು ಹನುಮಂತಗೆ ಶೋಭಾ ತಿರುಗೇಟು ನೀಡಿದ್ದಾರೆ.

ಸದ್ಯ ಬಿಗ್ ಬಾಸ್ ಸಾಮ್ರಾಜ್ಯದ ರಾಜನಾಗಿರುವ ಉಗ್ರಂ ಮಂಜು ಅವರು ಹನುಮಂತ ಕೊಟ್ಟ ಕಾರಣವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಶೋಭಾ ರಾಂಗ್ ಆಗಿದ್ದಾರೆ. ಆ ಕಾರಣ ಸೂಕ್ತ ಅನ್ನೋದಾಗಿದ್ರೆ ನಾನು ವಾದನೇ ಮಾಡುತ್ತಿರಲಿಲ್ಲ ಎಂದಿದ್ದಾರೆ. ನಟಿಗೆ ಇದು ‘ಬಿಗ್ ಬಾಸ್’ ಮಹಾಪ್ರಭುಗಳ ಆಜ್ಞೆ ಎಂದು ಮಂಜು ಸಿಟ್ಟಿನಿಂದ ಹೋಗಿ ಕುಳಿತುಕೊಳ್ಳಿ ಎಂದಿದ್ದಾರೆ. ಇಲ್ಲ ನಾನು ಕೂರಲ್ಲ ಮಹಾಪ್ರಭು ಎಂದು ಶೋಭಾ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.

Share This Article