BBK 11: ಫೈರ್‌ ಲೇಡಿ ಶೋಭಾ ಶೆಟ್ಟಿ ಅಬ್ಬರಕ್ಕೆ ದಂಗಾದ ಉಗ್ರಂ ಮಂಜು

Public TV
1 Min Read

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದೆ. ಇದರ ನಡುವೆ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲಲು ಶೋಭಾ ಅನರ್ಹ ಎಂಬ ವಿಚಾರಕ್ಕೆ ನಟಿ ಮತ್ತು ಮಂಜು ನಡುವೆ ವಾಕ್ಸಮರ ನಡೆದಿದೆ. ಈ ವೇಳೆ, ಶೋಭಾ ಅರ್ಭಟಕ್ಕೆ ಉಗ್ರಂ ಮಂಜು ಸೈಲೆಂಟ್ ಆಗಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿಯಾದ ರಜತ್ ಹಾಗೂ ಶೋಭಾ ಅವರ ಪೈಕಿ ಈ ಮನೆಯ ಕ್ಯಾಪ್ಟನ್ ಆಗಲು ಯಾರು ಅನರ್ಹರು ಎಂದು ಹೇಳುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಇಂದು ಬಿಗ್ ಬಾಸ್ ಮನೆಯ ಸದಸ್ಯರು ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅನರ್ಹರು ಎಂದು ಸ್ಪರ್ಧಿಗಳು ಆಯ್ಕೆ ಮಾಡಬೇಕಿತ್ತು. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

ಆಗ ರೂಲ್ಸ್ ಅಂಡ್ ರೆಗ್ಯೂಲೇಷನ್ ಏನು ಇರುತ್ತೋ ಅದನ್ನ ಎಲ್ಲೋ ಅಲ್ಲಾಡ್ಸಿದ್ದು ಶೋಭಾ ಅವರು ಎಂದು ಉಗ್ರಂ ಮಂಜು ರಾಂಗ್ ಆಗಿದ್ದಾರೆ. ಮಂಜು ಆಡಿದ ಮಾತಿಗೆ ಶೋಭಾ ಕೆರಳಿ ಕೆಂಡವಾಗಿದ್ದಾರೆ. ಅಲ್ಲಾಡ್ಸೋದು ಗಿಲ್ಲಾಡ್ಸೋದು ಅಂದ್ರೆ ಏನು? ಇವರಿಗೆ ಕ್ಲ್ಯಾರಿಟಿಯೇ ಇಲ್ಲ ಎಂದು ಶೋಭಾ ಗುಡುಗಿದ್ದಾರೆ. ಸೂಕ್ತ ಕಾರಣ ಕೊಡುತ್ತಾ ಇಲ್ಲ. ಆಡುವ ಮಾತಿನಲ್ಲಿ ಕ್ಲ್ಯಾರಿಟಿ ಇಲ್ಲ ಎಂದಿದ್ದಾರೆ ಶೋಭಾ.

ಕ್ಲ್ಯಾರಿಟಿಯಿಂದಲೇ ಹೇಳುತ್ತಾ ಇದ್ದೀನಿ ಕಿರುಚಬೇಡಿ ಎಂದು ಮಂಜು ತಿರುಗೇಟು ನೀಡಿದ್ದಾರೆ. ನನ್ನ ಮಾತು ಕೇಳಿಸಿಕೊಳ್ಳಿ, ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಮಂಜು ಮೇಲೆ ಶೋಭಾ ಗುಡುಗಿದ್ದಾರೆ. ಶೋಭಾ ಅವರ ಕೂಗಾಟಕ್ಕೆ ಉಗ್ರಂ ಮಂಜು ಕೂಡ ಒಂದು ಕ್ಷಣ ಸೈಲೆಂಟ್ ಆಗಿದ್ದಾರೆ. ಇವರ ವಾಕ್ಸಮರ ನೋಡಿ ಮನೆ ಮಂದಿ ಸೈಲೆಂಟ್‌ ಆಗಿದ್ದಾರೆ. ದೊಡ್ಮನೆಯಲ್ಲಿ ಸದ್ಯ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾ ಹವಾ ಜೋರಾಗಿದೆ. ಇನ್ಮೇಲೆ ಅವರ ಆಟ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.

Share This Article