ರಾಮನಗರಕ್ಕೆ ಬೆಂಗಳೂರು ಹೆಸರು ಸೇರಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ: ಶೋಭಾ ಕರಂದ್ಲಾಜೆ ಕಿಡಿ

Public TV
1 Min Read

ಮಂಗಳೂರು: ಬೆಂಗಳೂರು(Bengaluru) ಎನ್ನುವ ಪದದಲ್ಲೇ ಲ್ಯಾಂಡ್ ಮಾಫಿಯಾ ಇದೆ. ರಾಮನಗರದ ಹೆಸರು ಬದಲಿಗೆ ಬೆಂಗಳೂರು ಸೇರಿಸಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಕಿಡಿಕಾರಿದ್ದಾರೆ.

ಸುಳ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸುತ್ತ ಯಾರು ಲ್ಯಾಂಡ್ ಮಾಫಿಯಾ ಮಾಡುತ್ತಿದ್ದಾರೋ ಅವರಿಗೆ ರಾಮನಗರ(Ramanagara) ಹೆಸರು ಬೇಕಾಗಿಲ್ಲ. ಅವರಿಗೆ ಬೆಂಗಳೂರು ಹೆಸರು ಬೇಕು. ಯಾಕೆಂದರೆ ಅವರ ಜಮೀನಿಗೆ ವ್ಯಾಲ್ಯೂ ಬರಬೇಕು. ಈ ಕಾರಣಕ್ಕಾಗಿ ರಾಮನಗರ ಹೆಸರು ತೆಗೆದು ಲ್ಯಾಂಡ್ ಮಾಫಿಯಾ ಶಕ್ತಿಗಳು, ದೊಡ್ಡ ದೊಡ್ಡ ಕುಳಗಳು ಬೆಂಗಳೂರು ದಕ್ಷಿಣ(Bengaluru South) ಎಂದು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ಸೆರೆಹಿಡಿದು ವೈರಲ್‌ ಮಾಡ್ತಿದ್ದವ ಅರೆಸ್ಟ್‌

ರೈತರ ಜಮೀನು ಕಿತ್ಕೊಂಡು, ಬೇರೆಯವರಿಗೆ ಕೊಡುವ ದೊಡ್ಡ ಷಡ್ಯಂತ್ರ ಇದರ ಹಿಂದೆ ಅಡಗಿದೆ ರಾಮನಗರ ಜಿಲ್ಲೆಯ ಹೆಸರು ಉಳಿಸಲು ಅಲ್ಲಿನ ಜನರು ಆಗ್ರಹ ಮಾಡಬೇಕು ಎಂದಿದ್ದಾರೆ.

Share This Article