ಶಿಕ್ಷಣದ ಬಗ್ಗೆ ಗಮನ ಕೊಡಿ, ಯಾವುದೇ ಸಂಘಟನೆ ನಿಮ್ಮ ಬದುಕಿನ ಜೊತೆ ಬರುವುದಿಲ್ಲ: ಶೋಭಾ ಕರಂದ್ಲಾಜೆ

Public TV
2 Min Read

-ಮುಸಲ್ಮಾನ ಮಹಿಳೆಯರು ಬಹಳಷ್ಟು ಕಷ್ಟ ಪಟ್ಟು ಜೀವನ ಮಾಡುವವರಿದ್ದಾರೆ

ಉಡುಪಿ: ಮಹಿಳೆಯನ್ನು ಶಿಕ್ಷಣದಿಂದ ಆಚೆಯಿಡುವ ಹುನ್ನಾರ ನಡೆಯುತ್ತಿದೆ. ಹಿಜಬ್ ಹೋರಾಟದ ಹೆಣ್ಣುಮಕ್ಕಳಿಗೆ ಒಂದು ಕಿವಿ ಮಾತು ಹೇಳುತ್ತೆನೆ ಎಂದು ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಕೆಯ ಸಂದೇಶವನ್ನು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಬ್ ಹೋರಾಟದ ಹೆಣ್ಣುಮಕ್ಕಳಿಗೆ ಒಂದು ಕಿವಿ ಮಾತು ಹೇಳುತ್ತೇನೆ. ನಮ್ಮ ಹೆಣ್ಣುಮಕ್ಕಳಿಗೆ ಯಾರದೇ ಕನಿಕರ ಬೇಡ. ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಬೇಕು, ಉದ್ಯೋಗ ಬೇಕು. ಮಹಿಳೆಯ ಕೈಯ್ಯಲ್ಲಿ ಹಣ ಓಡಾಡಬೇಕು. ಮುಸಲ್ಮಾನ ಮಹಿಳೆಯರು ಬಹಳಷ್ಟು ಕಷ್ಟ ಪಟ್ಟು ಜೀವನ ಮಾಡುವವರಿದ್ದಾರೆ. ನಿಮ್ಮದೇ ಗಂಡ 3- 4 ಮದುವೆಯಾಗಿ ನಿಮಗೆ ಸಮಸ್ಯೆ ಕೊಡುತ್ತಿದ್ದಾರೆ. ಶಿಕ್ಷಣ ಪಡೆದು ಉದ್ಯೋಗಗಳಿಸುವ ಕಡೆ ಗಮನ ಕೊಡಿ ಎಂದು ಹೇಳಿದ್ದಾರೆ.

ನೀವು ನಿಮ್ಮ ಶಿಕ್ಷಣದ ಬಗ್ಗೆ ಗಮನ ಕೊಡಿ. ಯಾವುದೇ ಸಂಘಟನೆ ನಿಮ್ಮ ಮುಂದಿನ ಬದುಕಿನ ಜೊತೆ ಬರುವುದಿಲ್ಲ. ಪ್ರಚೋದನೆ ಮಾಡುತ್ತಾರೆ ನಿಮ್ಮನ್ನ ಶಾಲೆಯಿಂದ ಆಚೆ ಇಡುತ್ತಾರೆ. ಮದುವೆಯಾಗಿ, ಮಕ್ಕಳಾಗುವ ಸಂದರ್ಭ ಕಣ್ಣೀರಿಡುತ್ತೀರಿ ಯಾವ ಸಂಘಟನೆ ನೀವು ನಿಮ್ಮ ಸಹಾಯಕ್ಕೆ ಬರಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

ಮುಗ್ಧ ಹೆಣ್ಣುಮಕ್ಕಳ ದಾರಿತಪ್ಪಿಸುವುದು ಧರ್ಮದ ಅಫೀಮು ಹತ್ತಿಸುವುದು ಬಹಳ ಸುಲಭ. ಶ್ರೀಮಂತರ ಮಕ್ಕಳು ಹಿಜಬ್ ಹಾಕುವುದಿಲ್ಲ ಅವರ ಬಗ್ಗೆ ನಿಮ್ಮ ನಿಲುವೇನು? ಬಡವರ ಹೆಣ್ಣುಮಕ್ಕಳನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ? ಇನ್ನೂ ಕಣ್ಣು ಬಿಡಲು ಪುಟಾಣಿ ಮಕ್ಕಳ ಮೇಲೆ ಧರ್ಮದ ಹೆಸರು ಹಿಜಬ್ ಹೆಸರಲ್ಲಿ ಪ್ರಚೋದನೆ ಮಾಡುತ್ತಿದ್ದೀರಾ? ಹಿಜಬ್ ನಿಂದ ರಕ್ಷಣೆಯಾಗುತ್ತದೆ ಎಂಬುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

ಭಾರತದ ಕಾನೂನು ಎಲ್ಲರನ್ನೂ ರಕ್ಷಣೆ ಮಾಡುತ್ತದೆ. ಪೊಲೀಸರು ಕಾನೂನು ಎಲ್ಲರಿಗೂ ರಕ್ಷಣೆ ಕೊಡುತ್ತದೆ. ಭಾರತ ಭಾರತದಂತಹ ಸುಖ ದೇಶ ವಿಶ್ವದ ಎಲ್ಲೂ ನಿಮಗೆ ಸಿಗುವುದಿಲ್ಲ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿಕೊಂಡವರು ನೆಮ್ಮದಿಯಿಂದ ಬದುಕುತ್ತಿಲ್ಲ. ಮೋದಿ ಯೋಗಿ ಯಡಿಯೂರಪ್ಪ ಜಾತಿ ಆಧಾರದಲ್ಲಿ ಯೋಜನೆ ಹಂಚಿಕೆ ಮಾಡಿಲ್ಲ. ಬಟ್ಟೆಯ ಕಾರಣಕ್ಕೆ ಅನಾಹುತ ಆಗುತ್ತದೆ ಎಂಬುದು ಸುಳ್ಳು. ಬಟ್ಟೆಯ ಕಾರಣಕ್ಕೆ ನಾವು ನಮಗೆ ರಕ್ಷಣೆ ಸಿಗುತ್ತದೆ ಎಂಬೂದು ಸರಿಯಲ್ಲ. ರಕ್ಷಣೆ ನೆಲದ ಕಾನೂನು ನಮ್ಮ ನೆಲದ ಸಂವಿಧಾನ ಕೊಡುತ್ತದೆ. ಧರ್ಮದ ಆಧಾರದಲ್ಲಿ ರಕ್ಷಣೆ ಪಡೆಯುವುದಾದರೆ ನೀವು ಸಂವಿಧಾನಾತ್ಮಕ ಕಾನೂನು ಪಾಲಿಸಲ್ವಾ? ಮಹಮದಾಲಿ ಜಿನ್ನಾನ ಜೊತೆ ಹೋರಾಟ ಮಾಡಿದವರು ಯಾರು ಹಿಜಬ್ ಹಾಕಿರಲಿಲ್ಲ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *