ಉಡುಪಿಯ ಮಹಿಷಮರ್ದಿನಿ ದೇವಸ್ಥಾನದ ಕರಸೇವೆಯಲ್ಲಿ ಶೋಭಾ ಕರಂದ್ಲಾಜೆ ಭಾಗಿ

Public TV
2 Min Read

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾರೆ ಹಿಡಿದು ಬುಟ್ಟಿ ಹೊತ್ತು ದೇವಸ್ಥಾನದ ಕರಸೇವೆ ಸಲ್ಲಿಸಿದ್ದಾರೆ.

ಉಡುಪಿ ನಗರದಲ್ಲಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸುತ್ತು ಪಾಳಿಯ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ. ಪ್ರತಿದಿನ ಹತ್ತಾರು ಮಂದಿ ಸಂಜೆಯ ವೇಳೆಗೆ ದೇಗುಲದ ನಿರ್ಮಾಣ ಕಾರ್ಯದಲ್ಲಿ ಕರಸೇವೆ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ಶೋಭಾ ಕರಂದ್ಲಾಜೆ ದೇವಸ್ಥಾನಕ್ಕೆ ಭೇಟಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದರು. ದೀಪ ಬೆಳಗುವ ಸೇವೆ ನಡೆಸಿ ಜನರೊಂದಿಗೆ ಕರಸೇವೆಯಲ್ಲಿ ಭಾಗಿಯಾದರು. ಇದನ್ನೂ ಓದಿ: ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

ಬುಟ್ಟಿಯಲ್ಲಿ ಕಲ್ಲು, ಮಣ್ಣು ಸಾಗಿಸಿ ಪ್ರಾಂಗಣದ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡರು. ದೇಗುಲದ ಮುಂಭಾಗದಲ್ಲಿ ಹಾರೆ ಹಿಡಿದು ಸುಮಾರು ಅರ್ಧ ಗಂಟೆಗಳ ಕಾಲ ಕೆಲಸ ಮಾಡಿದರು. ದೇವಸ್ಥಾನದ ವತಿಯಿಂದ ಶೋಭಾ ಅವರಿಗೆ ಪೂಜಾ ಪ್ರಸಾದ ಮತ್ತು ದೇವಿಗೆ ಉಡಿಸಿದ ಸೀರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಶೋಭಾ ಅವರು ಕರಸೇವೆಯಲ್ಲಿ ಭಾಗಿಯಾಗುವ ಮೂಲಕ ಸ್ಥಳೀಯರು ಸಹ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡಿದರು.

ನನಗೆ ಖುಷಿಯಾಗಿದೆ: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಸುತ್ತುವ ಕೆಲಸ ಆಗುತ್ತಿದೆ. ನಾನು ದೇವಸ್ಥಾನದ ಜೀರ್ಣೋದ್ಧಾರದ ಕರಸೇವೆಯಲ್ಲಿ ಭಾಗಿಯಾಗಿದ್ದು, ಮನಸ್ಸಿಗೆ ಬಹಳ ಸಂತೋಷವಾಗಿದೆ. ಜೀರ್ಣೋದ್ಧಾರ ಆರಂಭವಾದ ಸಂದರ್ಭದಲ್ಲಿ ಒಂದು ಬಾರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ. ಇಂದು ದೇವಿಯ ಸೇವೆ ಮಾಡುವ ಅವಕಾಶ ಒದಗಿ ಬಂತು ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಅವರು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಚ್ಚಾದ ಭೀಮಾ ನದಿ ಒಳಹರಿವು – ಯಾದಗಿರಿ ವೀರಾಂಜನೇಯ, ಕಂಗಳೇಶ್ವರ ದೇಗುಲ ಜಲಾವೃತ

ದೇಶದಲ್ಲಿ ಹಲವಾರು ದೇವಸ್ಥಾನಗಳು ಭಕ್ತ ಜನರ ಕರಸೇವೆಯ ಮೂಲಕವೇ ಸಂಪೂರ್ಣವಾದ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆ ಇದೆ. ಕಡಿಯಾಳಿ ದೇವಸ್ಥಾನದಲ್ಲೂ ನಿರಂತರವಾಗಿ ಕರಸೇವೆಗಳು ನಡೆಯುತ್ತಿದೆ ಎಂದು ಕಮಿಟಿಯ ಸದಸ್ಯರು ಹೇಳಿದ್ದಾರೆ. ಪುಟಾಣಿ ಮಕ್ಕಳು, ಮಹಿಳೆಯರು, ಹಿರಿಯರು ಎಲ್ಲರೂ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ದೇವರು ಎಲ್ಲರಿಗೂ ಒಳ್ಳೇದು ಮಾಡಲಿ ದೇಶದಲ್ಲಿ ರೈತರಿಗೆ ದೇವರು ಆಶೀರ್ವದಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *