ಹಾಸನ: ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರ ಹತ್ಯೆಯು ಅಲ್ಲಿರುವಂತಹ ಸಮಾಜವಾದಿ, ಕಾಂಗ್ರೆಸ್‌ನ ಪೂರ್ವನಿಯೋಜಿತ ಘಟನೆಯಾಗಿದೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಮಂಗಳವಾರ ಹಾಸನಾಂಬೆ ತಾಯಿಯ ದರ್ಶನ ಪಡೆದ ನಂತರ ಮಾತನಾಡಿದ ಅವರು, ರೈತರ ಹತ್ಯೆ ಒಂದು ದುರ್ಘಟನೆ. ಆದರೆ ರೈತರ ಜೊತೆ ಭಾರತ ಸರ್ಕಾರ ಇದೆ. ರೈತರಿಗೆ ಯಾವುದೇ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ. ಈವರೆಗೆ ಹನ್ನೊಂದು ಸುತ್ತಿನ ಮಾತುಕತೆಯಾಗಿದೆ. ಮುಂದೆ ಕೂಡ ಅವರ ಮಾತುಗಳನ್ನು ಕೇಳಲು ಸಿದ್ಧರಿದ್ದೇವೆ. ಪರಸ್ಪರ ಚರ್ಚೆಯಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ರಸ್ತೆಯಲ್ಲಿ ನಿಂತರೆ ಯಾವುದೇ ಸಮಸ್ಯೆ ಬಗೆಹರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ
ರೈತರ ಹತ್ಯೆಯು ಅಲ್ಲಿರುವಂತಹ ಸಮಾಜವಾದಿ, ಕಾಂಗ್ರೆಸ್‌ನ ಪೂರ್ವನಿಯೋಜಿತ ಘಟನೆಯಾಗಿದೆ. ಮುಂದಿನ ಉತ್ತರಪ್ರದೇಶ, ಪಂಜಾಬ್ ಚುನಾವಣೆಯನ್ನು ಗುರಿಯಾಗಿಸಿ ಈ ರೀತಿಯ ಷಡ್ಯಂತ್ರ ನಡೆದಿದೆ. ಈ ಷಡ್ಯಂತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ಹಂತದಲ್ಲಿ ನಾನೇನು ಮಾತನಾಡುವುದಿಲ್ಲ, ತನಿಖೆಯ ವರದಿ ಬರಬೇಕು. ಕೊಲೆಯ ಹಿಂದೆ ಯಾರು ಇದ್ದಾರೆ ಎಂಬ ಸತ್ಯ ಬಯಲಾಗಬೇಕು. ಅದಕ್ಕಾಗಿ ಈಗಾಗಲೇ ಸಮಿತಿ ರೂಪಗೊಂಡಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ; ಜಯದ ನಗೆ ಬೀರಿದ ಬಿಜೆಪಿ