ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪರದಾಡಿದ ಶಿವರಾಜ್ ಸಿಂಗ್ ಚೌಹಾಣ್!

Public TV
1 Min Read

ರಾಂಚಿ: ಜಾರ್ಖಂಡ್‌ನ (Jharkhand) ಬಹರಗೋರಾ ನಗರದಲ್ಲಿ ಚುನಾವಣಾ ರ‍್ಯಾಲಿಗೆ ತೆರಳಿದ್ದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಕಾರು ರಸ್ತೆಯ ಕೆಸರು ಗುಂಡಿಯಲ್ಲಿ ಸಿಲುಕಿ ಪರದಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಅವರು ಪ್ರಯಾಣಿಸುತ್ತಿದ್ದ ಕಾರು ಜಲಾವೃತವಾದ ರಸ್ತೆಯ ದೊಡ್ಡ ಗುಂಡಿಯಲ್ಲಿ ಓರೆಯಾಗಿ ನಿಂತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಧಾವಿಸಿ ಕಾರನ್ನು ತಳ್ಳಲು ಯತ್ನಿಸಿದ್ದಾರೆ. ಆದರೆ ಕಾರು ಗುಂಡಿಯಿಂದ ಮೇಲೆ ಬರಲಿಲ್ಲ. ಬಳಿಕ ಶಿವರಾಜ್ ಚೌಹಾಣ್ ವಾಹನದಿಂದ ಹೊರಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ

ಶಿವರಾಜ್ ಸಿಂಗ್ ಚೌಹಾಣ್ ಜಾರ್ಖಂಡ್‌ನ ಬಿಜೆಪಿಯ (BJP) ಚುನಾವಣಾ ಉಸ್ತುವಾರಿ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕಾಗಿ ಅಲ್ಲಿಗೆ ಬಂದಿದ್ದರು.

ಇನ್ನೂ ರ‍್ಯಾಲಿಯಲ್ಲಿ ಮಾತಾಡಿದ ಅವರು, ರಾಜ್ಯದಲ್ಲಿ ಕಾರ್ಮೋಡ ಕಟ್ಟಿ ಮಳೆಯಾಗುತ್ತಿದೆ. ಇಲ್ಲಿ ಸೂರ್ಯ ಉದಯಿಸುತ್ತಾನೆ. ಆ ಸೂರ್ಯ ಕಮಲವೇ ಎಂದು ಹೇಳಬಲ್ಲೆ. ರಾಜ್ಯದಲ್ಲಿ ಬದಲಾವಣೆ ಬರುತ್ತದೆ ಎಂದು ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಸರ್ಕಾರದ ಐದು ವರ್ಷಗಳ ಅಧಿಕಾರಾವಧಿಯು ಜನವರಿ 2025 ರಲ್ಲಿ ಕೊನೆಗೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

Share This Article