ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

By
2 Min Read

ಗತ್ತೇ ತಿರುಗಿನೋಡುವಂಥಹ ಸಿನಿಮಾ ಕೊಟ್ಟ ಕೆಜಿಎಫ್ ಮೇಲೆ ಇಡೀ ದೇಶದ ದೃಷ್ಟಿ ಇದೆ. ಕನ್ನಡ ಮೂಲದ ಚಿತ್ರವಾದ್ದರಿಂದ ಕನ್ನಡ ನೆಲದಲ್ಲೇ ಕೆಜಿಎಫ್ ಅನಾವರಣ ಮಾಡಲಾಗಿದೆ. ವಿಶೇಷ ಅಂದ್ರೆ ಈ ಅದ್ದೂರಿ ಕಾರ್ಯಕ್ರಮವನ್ನ ನಟ, ನಿರ್ದೇಶಕ, ನಿರೂಪಕ ಕರಣ್ ಜೋಹರ್ ನಿರೂಪಣೆ ಮಾಡಿದ್ದಾರೆ.

ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ನಡೆದ ಅದ್ದೂರಿ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಇಡೀ ದೇಶದ ಸುದ್ದಿ ವೃಂದವನ್ನು ಕರೆಸಿಕೊಂಡಿತ್ತು ಕೆಜಿಎಫ್ ಚಿತ್ರತಂಡ. ಚಿತ್ರದ ಬಿಗ್ ತಾರಾಗಣದ ಜೊತೆ ಪ್ಯಾನ್ ಇಂಡಿಯಾ ಪತ್ರಕರ್ತರ ಸಮ್ಮುಖದಲ್ಲಿ ಕೆಜಿಎಫ್ ಪಾರ್ಟ್ 2 ಟ್ರೈಲರ್ ಅನಾವರಣಗೊಂಡಿದೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಟ್ರೈಲರ್ ರಿಲೀಸ್ ಆಗಿದೆ. ಐದು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿದ್ದು ರಾಕಿ ಫ್ಯಾನ್ಸ್ ನಿರೀಕ್ಷೆಗೆ ಉತ್ತರ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕೆಜಿಎಫ್ 2 ಟ್ರೈಲರ್ ರಿಲೀಸ್ ಆಯ್ತು.

ಒದೊಂದೂ ಭಾಷೆಯಲ್ಲೂ ಆಯಾ ಸೂಪರ್ ಸ್ಟಾರ್‌ಗಳು ಡಿಜಿಟಲ್ ರಿಲೀಸ್ ಉಸ್ತುವಾರಿಯನ್ನ ವಹಿಸಿಕೊಂಡ್ರು. ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ರಾಮ್‍ಚರಣ್ ತೇಜ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ಹಿಂದಿಯಲ್ಲಿ ಫರಾನ್ ಅಖ್ತರ್ ಸೇರಿದಂತೆ ದೊಡ್ಡ ದೊಡ್ಡ ಕೈಗಳು ಕೆಜಿಎಫ್ ಸ್ಯಾಂಪಲ್‌ನನ್ನು ಅನಾವರಣಗೊಳಿಸಿದ್ರು.

ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರುವ ಕೆಜಿಎಫ್ 2 ಚಿತ್ರದ ಟೀಸರ್ ಹಾಗೂ ಹಾಡೊಂದು ರಿಲೀಸ್ ಆಗಿದ್ದು ಬಿಟ್ಟರೆ ಪಾರ್ಟ್ 2 ಬಗೆಗಿನ ಚಿಕ್ಕ ಸುಳಿವೂ ಇದುವರೆಗೆ ಇರಲಿಲ್ಲ. ಆ ಕುತೂಹಲವನ್ನ ಹಾಗೇ ಕಾಯ್ದಿರಿಸಿಕೊಂಡಿದ್ದ ಚಿತ್ರತಂಡ ರಿಲೀಸ್‍ಗೆ ಕೆಲವೇ ದಿನಗಳ ಮುಂಚೆ ಈಗ ಆಫಿಷಿಯಲ್ ಟ್ರೈಲರ್ ಲಾಂಚ್ ಮಾಡಿದೆ.

ಅನಾಥ ಹುಡುಗನೊಬ್ಬ ಮುಂಬೈಗೆ ತೆರಳಿ ಗ್ಯಾಂಗ್‍ಸ್ಟರ್ ಆಗ್ತಾನೆ. ಒಂದು ಡೀಲ್‍ಗಾಗಿ ಬೆಂಗಳೂರಿಗೆ ಬರುವ ಹೀರೋ ಅಲ್ಲಿ ತನ್ನ ನಿರೀಕ್ಷೆಯ ಸಾಮ್ರಾಜ್ಯ ಕಟ್ಟಿಕೊಳ್ಳಲು ಪ್ರಾಣ ಒತ್ತೆಯಿಟ್ಟು ಯುದ್ಧ ಗೆದ್ದು ಯಶಸ್ವಿಯಾಗ್ತಾನೆ. ರಾಕಿ ಜೀವನ ಅಧ್ಯಾಯದ ಎರಡನೇ ಪುಟ ಇದೀಗ ತೆರೆದುಕೊಂಡಿದೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್: ಮಲಯಾಳಂನಲ್ಲಿ ಪೃಥ್ವಿರಾಜ್, ಹಿಂದಿಯಲ್ಲಿ ಫರಾನ್ ಅಖ್ತರ್ ರಿಲೀಸ್

ಈ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದರು. ಒಂದೇ ಕಾರ್ಯಕ್ರಮದಲ್ಲಿ ರಾಕಿಬಾಯ್ ಮತ್ತು ಮುನ್ನಬಾಯ್ ಒಂದಾಗಿದ್ದು, ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ಸೇರಿಕೊಂಡಿತು. ಈ ಅದ್ದೂರಿ ಕಾರ್ಯಕ್ರಮಕ್ಕೆ ಚಂದನವನದ ಅನೇಕ ಗಣ್ಯರು ಭಾಗಿಯಾಗಿದ್ದು, ಟಾಲಿವುಡ್ ಮತ್ತು ಬಾಲಿವುಡ್ ಸಿನಿತಾರೆಯರು ಭಾಗಿಯಾಗಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *