ಚಿಕಿತ್ಸೆಗಾಗಿ ಅಮೆರಿಕಗೆ ತೆರಳುವ ಮುನ್ನ ಶಿವಣ್ಣ ಭಾವುಕ

Public TV
1 Min Read

ಟ ಶಿವರಾಜ್‌ಕುಮಾರ್ (Shivarajkumar) ಅವರು ಚಿಕಿತ್ಸೆಗಾಗಿ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಏರ್‌ಪೋರ್ಟ್ ಪ್ರವೇಶಿಸುವ ಮುನ್ನ ಅಭಿಮಾನಿಗಳತ್ತ ಶಿವಣ್ಣ ಕೈ ಬೀಸುತ್ತಾ ಭಾವುಕರಾಗಿದ್ದಾರೆ. ಇದನ್ನೂ ಓದಿ:ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್

ಡಿ.24ರಂದು ಶಿವಣ್ಣಗೆ ಯುಎಸ್‌ನಲ್ಲಿ ಸರ್ಜರಿ ನಡೆಯಲಿದೆ. ಈ ಹಿನ್ನೆಲೆ ಪತ್ನಿ ಮತ್ತು ಮಗಳು ನಿವೇದಿತಾ (Niveditha) ಜೊತೆ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಏರ್‌ಪೋರ್ಟ್ ಪ್ರವೇಶಿಸುವ ಮುನ್ನ ಭಾವುಕರಾಗಿ ಅಭಿಮಾನಿಗಳತ್ತ ನಟ ಕೈ ಬೀಸಿದ್ದಾರೆ.

ಸರ್ಜರಿಯ ಬಳಿಕ ಮುಂದಿನ ತಿಂಗಳು ಜನವರಿ 26ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಆ ನಂತರ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಅವರು ಆಕ್ಟೀವ್ ಆಗಲಿದ್ದಾರೆ.

Share This Article