ದಸರಾ ಮೆರವಣಿಗೆ ವೇಳೆ ತಮಟೆ ಸದ್ದಿಗೆ ಸ್ಟೇಪ್ ಹಾಕಿದ ಶಿವಣ್ಣ

Public TV
1 Min Read

– ಶಿವರಾಜ್‌ಕುಮಾರ್‌ಗೆ ಸೊಂಡಿಲೆತ್ತಿ ಸೆಲ್ಯೂಟ್‌ ಮಾಡಿದ ಧನಂಜಯ

ಮೈಸೂರು: ಗುರುವಾರ ನಡೆದ ಮೈಸೂರು ದಸರಾ (Mysuru Dasara) ಮೆರವಣಿಗೆಯಲ್ಲಿ ನಟ ಶಿವರಾಜ್ ಕುಮಾರ್ (Shivarajkumar) ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ದಸರಾ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡಲು ಹೈ ಸರ್ಕಲ್ ಬಳಿಯಿರುವ ಖಾಸಗಿ ಹೋಟೆಲ್ ಮುಂಭಾಗ ಶಿವರಾಜ ಕುಮಾರ್ ಕುಟುಂಬ ಸಮೇತ ಕುಳಿತಿದ್ದರು‌. ಆಗ ಮೆರವಣಿಗೆಯಲ್ಲಿ ಸಾಗಿ ಬಂದ ತಮಟೆಯ ಟೀಂನ ಸದ್ದಿಗೆ ಖುಷಿಯಿಂದಲೇ ತಾವು ಕುಳಿತಿದ್ದ ಜಾಗದಲ್ಲೇ ಎದ್ದು ನಿಂತು ಸ್ಟೆಪ್ ಹಾಕಿದರು. ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

ಇದೇ ವೇಳೆ ಮೆರವಣಿಗೆಯಲ್ಲಿ ಸಾಗಿ ಬಂದ ಧನಂಜಯ ಆನೆ ಶಿವರಾಜ್ ಕುಮಾರ್‌ಗೆ ಸೆಲ್ಯೂಟ್ ಮಾಡಿತು.

ಮೈಸೂರು ದಸರಾ ಜಂಬೂ ಸವಾರಿಯು ಗುರುವಾರ ಅದ್ಧೂರಿಯಾಗಿ ನೆರವೇರಿದೆ. ಸತತ 6ನೇ ಬಾರಿಗೆ ಚಿನ್ನದಂಬಾರಿ ಹೊತ್ತು ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ನಡೆಸಿಕೊಟ್ಟಿದ್ದಾನೆ. ಲಕ್ಷಾಂತರ ಜನರು ವಿಶ್ವವಿಖ್ಯಾತ ದಸರಾವನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ

Share This Article