ನಾನು ಸುಮ್ಮನೆ ಬಂದರೆ ಅತಿಥಿ ಹುಡುಕೊಂಡು ಬಂದರೆ ತಿಥಿ: ಡೈಲಾಗ್ ಹೊಡೆದ ಶಿವಣ್ಣ

Public TV
1 Min Read

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಸಿನಿಮಾ ಕೆಲಸದ ನಡುವೆ ಇದೀಗ ತುಮಕೂರಿನ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವೇದಿಕೆಯಲ್ಲಿ ಅಭಿಮಾನಿಗಳಿಗಾಗಿ ಶಿವಣ್ಣ ಖಡಕ್ ಆಗಿ ಡೈಲಾಗ್‌ವೊಂದನ್ನು ಹೇಳಿದ್ದಾರೆ. ನಾನು ಸುಮ್ಮನೆ ಬಂದರೆ ಅತಿಥಿ, ಹುಡುಕೊಂಡು ಬಂದರೆ ತಿಥಿ ಎಂದಿದ್ದಾರೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ತರುಣ್ ದಂಪತಿ- ಹನಿಮೂನ್‌ನಲ್ಲಿ ಜಾಲಿ ಮೂಡ್‌ಗೆ ಜಾರಿದ ಜೋಡಿ

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಶಿವಣ್ಣ ಮಾತನಾಡಿ, ತುಮಕೂರು ಅಂದರೆ ಅಪ್ಪಾಜಿಗೆ ತುಂಬಾ ಇಷ್ಟ. ಇಲ್ಲಿನ ತಟ್ಟೆ ಇಡ್ಲಿ ಅಂದರೆ ಅವರಿಗೆ ತುಂಬಾ ಇಷ್ಟ. ನಮ್ಮ ಕುಟುಂಬಕ್ಕೆ ಆಪ್ತರು ಇರುವವರು ಈ ಊರಿನಲ್ಲಿದ್ದಾರೆ. ತುಮಕೂರನ್ನು ನಾವು ಎಂದು ಮರೆಯಲ್ಲ. ನಾನು ಕೂಡ ಸಾಕಷ್ಟು ಬಾರಿ ಇಲ್ಲಿದೆ ಬಂದಿದ್ದೇನೆ. ತುಮಕೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ನನಗೆ ತುಂಬಾ ಖುಷಿ ತಂದಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

ಇನ್ನೂ ಅಭಿಮಾನಿಗಳ ಒತ್ತಾಯ ಮೇರೆಗೆ ಅವರ ಆಸೆಯಂತೆ ತಮ್ಮದೇ ಸಿನಿಮಾದ ಡೈಲಾಗ್ ಹೊಡೆದಿದ್ದಾರೆ. ನಾನು ಸುಮ್ಮನೆ ಬಂದರೆ ಅತಿಥಿ ಹುಡುಕೊಂಡು ಬಂದರೆ ತಿಥಿ ಎಂದಿದ್ದಾರೆ. ಅದಷ್ಟೇ ಅಲ್ಲ, ಮುತ್ತಣ್ಣ ಪೀಪಿ ಊದುವ ಎಂದು ಹಾಡು ಹಾಡಿ ಶಿವಣ್ಣ ರಂಜಿಸಿದ್ದಾರೆ.

Share This Article