ಹಾಸನಾಂಬೆ ದರ್ಶನ ಪಡೆದ ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ದಂಪತಿ

Public TV
1 Min Read

ಹಾಸನ: 10ನೇ ದಿನವೂ ಹಾಸನಾಂಬ ದೇವಿ (Hasanamba Temple) ಸಾರ್ವಜನಿಕ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ನಟ ಶಿವರಾಜ್ ಕುಮಾರ್ (Shivarajkumar) ದಂಪತಿ ಕೂಡ ದೇವಿ ದರ್ಶನ ಪಡೆದಿದ್ದಾರೆ. ಇತ್ತ ಕಾಂತಾರ-1 ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ (Rishab Shetty) ದಂಪತಿ ಕೂಡ ವಿಶೇಷ ಪೂಜೆ ಸಲ್ಲಿಸಿ ದೇವಿ ದರ್ಶನ ಪಡೆದರು.

ಲೋಕಾಯುಕ್ತ ಬಿ.ಎಸ್.ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ದೇವೇಗೌಡರು ಪುತ್ರಿ ಅನಸೂಯ ಕೂಡ ದೇವಿ ದರ್ಶನ ಪಡೆದಿದ್ದಾರೆ. ಇಂದು ಭಾನುವಾರ ಆದರೂ ಧರ್ಮ ದರ್ಶನ ಸಾಲಿನಲ್ಲಿ ಭಕ್ತರ ಸಂಖ್ಯೆ ಇಳಿಕೆಯಾಗಿದೆ. 1 ಸಾವಿರ, 300 ರೂ ಟಿಕೆಟ್ ಸಾಲುಗಳು ಸಂಪೂರ್ಣ ಖಾಲಿಯಾಗಿವೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಯಾವ ಕ್ರಾಂತಿಯೂ ನಡೆಯೋದಿಲ್ಲ: ಹೆಚ್‌ಡಿಕೆ ಭವಿಷ್ಯ

ಕಳೆದ ಎರಡು ದಿನಗಳಿಂದ ಭಾರೀ ಭಕ್ತರ ಆಗಮನದಿಂದ ಹೆಚ್ಚಾಗಿದ್ದು, ದರ್ಶನಕ್ಕೆ ಬರಲು ಭಕ್ತರ ಹಿಂದೇಟು ಹಾಕಿದ್ದಾರೆ. ಜೊತೆಗೆ ವಿಶೇಷ ಬಸ್‌ಗಳ ಸಂಖ್ಯೆ ಕೂಡ ಕಡಿಮೆ ಮಾಡಿದ ಕಾರಣ ಭಕ್ತರ ಸಂಖ್ಯೆ ತಗ್ಗಿದೆ. ಹಾಸನಾಂಬ ದೇವಾಲಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ: ಶ್ರೀರಾಮನಗರಿಯಲ್ಲಿ ಝಗಮಗಿಸಿದ ದೀಪೋತ್ಸವ – 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ

ಇನ್ನು ಡಿಸಿ ಲತಾ ಕುಮಾರಿಗೆ ಎಸ್ಪಿ ಮೊಹಮ್ಮದ್ ಸುಜೀತಾ ಪತ್ರ ಬರೆದು, ಭಕ್ತರನ್ನು ನಿಯಂತ್ರಿಸಲು ಕ್ರಮ ವಹಿಸದೇ ಇದ್ದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅತಿವೃಷ್ಟಿಯಿಂದ ಹಾನಿ – ಕರ್ನಾಟಕಕ್ಕೆ SDRFನಿಂದ 384 ಕೋಟಿ ರೂ. ಬಿಡುಗಡೆ

Share This Article