ಹಿಜಬ್ ವಿವಾದದಲ್ಲಿ ತಪ್ಪು ಮಾಡಿದವರನ್ನು ಬಂಧಿಸಲಿ: ತಂಗಡಗಿ

Public TV
1 Min Read

ಕೊಪ್ಪಳ: ಬಿಜೆಪಿ ಕಳ್ಳರ ಮಾತು ನಂಬಿ ನೀವು ಹಾಳಾಗಬೇಡಿ ಎಂದು ಕೊಪ್ಪಳದಲ್ಲಿ ಬಿಜೆಪಿ ನಾಯಕರು ವಿರುದ್ಧ ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನೆಡಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಎನ್ನುವುದು ಸರಸ್ವತಿ ವಿದ್ಯಾಪೀಠ ಇದ್ದಂತೆ. ಬಿಜೆಪಿ ಕಳ್ಳರ ಮಾತು ಕೇಳಿ ನಿಮ್ಮ ಜೀವನ ಹಾಳ ಮಾಡಿಕೊಳ್ಳಬೇಡಿ. ಕೇಸರಿ ಶಾಲಾ ಹಾಕಿಕೊಂಡು ಹೋಗೋದು ಕೀಳು ಮಟ್ಟದ ಶಿಕ್ಷಣವಾಗಿದೆ. ಶಿಕ್ಷಣ ಅನ್ನೋದು ಕೀಳು ಮಟ್ಟಕ್ಕೆ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಜಬ್ ಎನ್ನುವುದು ಬಹಳ ಹಿಂದಿನಿಂದ ಇದೆ. ವಿರೋಧ ಪಕ್ಷದವರ ಕೈವಾಡ ಅಂತಾರೆ. ಆದರೆ ಆಡಳಿತ ಮಾಡುತ್ತಿರುವವರು ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕುವುದನ್ನು ಬಿಟ್ಟು ದನ ಕಾಯ್ತಿದ್ದಾರಾ ಎಂದು ವಾಗ್ದಾಳಿ ನೆಡಸಿದರು. ಇದನ್ನೂ ಓದಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡುವಂತೆ ಸಿಎಂಗೆ ಮನವಿ

ಬಟ್ಟೆ ಹಾಕೊಕೊಳ್ಳುವುದು ಅವರ ಸ್ವಾತಂತ್ರ್ಯ. ಅದನ್ನು ನೀವು ಕೇಳಲು ಯಾರು ಎಂದು ಪ್ರಶ್ನಿಸಿದ ಅವರು, ಪ್ರಚೋದನೆ ಬಗ್ಗೆ ರೇಣುಕಾಚಾರ್ಯ ಅವರನ್ನು ಕೇಳಿ ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಬೇರೆಯವರ ಮಕ್ಕಳನ್ನು ಕೊಲ್ಲುವುದು ಬಿಜೆಪಿ ಕೆಲಸವಾಗಿದೆ. ಇದಕ್ಕೆ ನನ್ನ ದಿಕ್ಕಾರ ಇದೆ ಎಂದು ಖಂಡಿಸಿದರು. ಇದನ್ನೂ ಓದಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡುವಂತೆ ಸಿಎಂಗೆ ಮನವಿ

Share This Article
Leave a Comment

Leave a Reply

Your email address will not be published. Required fields are marked *