‘ಜೈಲರ್’ ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ ನೀಡಿದ ಶಿವರಾಜ್ ಕುಮಾರ್

By
2 Min Read

ದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ  ಶಿವರಾಜ್ ಕುಮಾರ್ ತೆರೆ ಹಂಚಿಕೊಂಡಿದ್ದಾರೆ. ರಜನಿ- ಶಿವಣ್ಣ ಕಾಂಬಿನೇಷನ್ ನಲ್ಲಿ ಜೈಲರ್ ಸಿನಿಮಾ ತಯಾರಾಗಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಎಷ್ಟೊತ್ತು ಇರಲಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. ಅದೊಂದು ಹೊಸ ಬಗೆಯ ಪಾತ್ರವಾಗಿದ್ದು, ಈಗಲೇ ಪಾತ್ರದ ಬಗ್ಗೆ ಹೇಳುವುದು ಬೇಡ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣದ ಹೆಸರಾಂತ ಸ್ಟಾರ್ ನಟರೇ ಈ ಸಿನಿಮಾದಲ್ಲಿ ಇದ್ದು, ಶಿವರಾಜ್ ಕುಮಾರ್ ಒಟ್ಟು ಹತ್ತು ನಿಮಿಷಗಳ ಕಾಲ ತೆರೆಯ ಮೇಲೆ ಕಾಣಲಿದ್ದಾರಂತೆ. ಹತ್ತು ನಿಮಿಷವಿದ್ದರೂ ಕಥೆಗೆ ಮತ್ತೊಂದು ತೂಕವನ್ನು ಕೊಡುವಂತ ಪಾತ್ರ ಅದಾಗಿದೆಯಂತೆ. ಅಷ್ಟರ ಮಟ್ಟಿಗೆ ಪಾತ್ರ ಪವರ್ ಫುಲ್ ಆಗಿದೆ ಎನ್ನುವುದು ಶಿವಣ್ಣ ಮಾತು. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

‘ಜೈಲರ್’ (Jailer) ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.

ಅಣ್ಣಾತ್ತೆ ಬಳಿಕ ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು‌ ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ‌ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ. ಸ್ಯಾಂಪಲ್ಸ್ ಮೂಲಕ ಭಾರಿ ಕ್ರೇಜ್ ಹೆಚ್ಚಿಸಿರುವ ರಜನಿಕಾಂತ್ ಸಿನಿಮಾ ಆಗಸ್ಟ್ 10ಕ್ಕೆ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.

ಒಟ್ಟು ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಮೂರು ಭಾಷೆಯ ಕಲಾವಿದರು ಚಿತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಶಿವರಾಜ್ ಕುಮಾರ್, ತಮಿಳಿನ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಂಡಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್