ಯತ್ನಾಳ್‌ ರಿಸೈನ್‌ ಮಾಡದ್ದಕ್ಕೆ ಶಿವಾನಂದ ಪಾಟೀಲ್‌ ರಾಜೀನಾಮೆ ಅಂಗೀಕಾರವಿಲ್ಲ: ಯುಟಿ ಖಾದರ್‌

Public TV
1 Min Read

ಬೆಂಗಳೂರು: ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ರಾಜೀನಾಮೆ ಸಲ್ಲಿಸದ ಕಾರಣ ಶಿವಾನಂದ‌ ಪಾಟೀಲ್ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ.

ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್‌ ಖಾದರ್‌, ಯತ್ನಾಳ್‌ ಅವರು ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ಹೀಗಾಗಿ ಶಿವಾನಂದ ಪಾಟೀಲ್‌ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿಲ್ಲ ಎಂದು ಹೇಳಿದರು.

ಈ ಸಂಬಂಧ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿ ಅದನ್ನು ಸ್ಪೀಕರ್ ಓದಿ ಹೇಳಿದರು. ಇದನ್ನೂ ಓದಿ: ರಾಜೀನಾಮೆಗೆ ಡೆಡ್‌ಲೈನ್‌ ಫಿಕ್ಸ್ ಮಾಡಿದ್ದು ಯತ್ನಾಳ್, ನಾನಲ್ಲ: ಶಿವಾನಂದ ಪಾಟೀಲ್

ಯತ್ನಾಳ್‌ ಹೇಳಿದ್ದೇನು?
ಪಹಲ್ಗಾಮ್‌ ಉಗ್ರರ ದಾಳಿಯ ನಂತರ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಸಚಿವ ಶಿವಾನಂದ ಪಾಟೀಲ್‌ ಹಾಗೂ ಹುನಗುಂದ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರಿಗೆ ಯತ್ನಾಳ್‌, ಇಬ್ಬರು ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ, ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದರು.

ಶಿವಾನಂದ ಪಾಟೀಲ್‌ ರಾಜೀನಾಮೆ:
ಯತ್ನಾಳ್‌ ಸವಾಲನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕೃಷಿ ಮಾರುಕಟ್ಟೆ ಶಿವಾನಂದ ಪಾಟೀಲ್‌ ಇಂದು ಬೆಳಗ್ಗೆ ಯುಟಿ ಖಾದರ್‌ ಅವರಿಗೆ ರಾಜೀನಾಮೆ ಪತ್ರ ನೀಡಿದ್ದರು.

Share This Article