ಹಾವೇರಿ: ಶಿವಮೊಗ್ಗದ ಭದ್ರಾವತಿಯಲ್ಲಿ (Bhadravathi) ಪಾಕ್ ಪರ ಘೋಷಣೆ ಕೂಗಿದ್ದು ಯಾರೇ ಆಗಿದ್ರು ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದ್ದಾರೆ.
ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಸವಣೂರು ಪಟ್ಟಣದಲ್ಲಿ ಪ್ಯಾಲೆಸ್ತೀನ್ ಧ್ವಜದ ಫೋಟೋ ಅಳವಡಿಸಿದ ಬಗ್ಗೆ ಮಾಹಿತಿ ತರಿಸಿಕೊಂಡು ಕ್ರಮ ತಗೆದುಕೊಳ್ಳುತ್ತೇವೆ. ಪ್ಯಾಲೆಸ್ತೀನ್ ಧ್ವಜ ಹಾಕಿದ್ದು ತಪ್ಪು. ಈ ರೀತಿ ಮಾಡಬಾರದು ಎಂದಿದ್ದಾರೆ. ಇದನ್ನೂ ಓದಿ: ಭದ್ರಾವತಿ ಈದ್ ಮೆರವಣಿಗೆಯಲ್ಲಿ ಪಾಕ್ ಪರ ಘೋಷಣೆ
ಮದ್ದೂರಿನಲ್ಲಿ (Maddur) ಗಣಪತಿ ವಿಸರ್ಜನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ದೇಶದ ಜನರನ್ನು ಒಗ್ಗೂಡಿಸೋಕೆ ಗಣೇಶ ಉತ್ಸವವನ್ನು ಬಾಲ ಗಂಗಾಧರ ತಿಲಕರು ಮಾಡಿದ್ರು. ಆದರೆ ದುರ್ದೈವ ಈ ರೀತಿಯಾಗಿದೆ. ಸಮಾಜದಲ್ಲಿ ಭಿನ್ನಾಭಿಪ್ರಾಯ ಆಗಬಾರದು. ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಯಾರು ಮಾಡಿದ್ದಾರೆ ಅಂತಾ ನಾವು ನೋಡಿಲ್ಲ, ನೀವೂ ನೋಡಿಲ್ಲ. ಈ ವಿಚಾರಗಳನ್ನು ಸಿಎಂ ಗಮನಕ್ಕೂ ತಂದಿದ್ದೇವೆ. ಶಾಂತಿ ಸಭೆ ಕರೆಯೋ ಮುಂಚೆಯೇ ಎಸ್‌ಒಪಿ ಕೂಡಾ ನಾವು ರಿಲೀಸ್ ಮಾಡಿದ್ದೆವು ಎಂದಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಡಿಜೆ ಹಾಕಿಕೊಂಡೇ ವಿಸರ್ಜನೆ ಮಾಡಿದ್ದಾರೆ. ಕೋರ್ಟ್ ಆದೇಶ ಇದೆ. ಕೆಲವು ಜಿಲ್ಲೆಗಳಲ್ಲಿ ಅನುಮತಿ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಮಾಡಿ ಮುಗಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಇಂತಿಷ್ಟೇ ಡೆಸಿಬಲ್ ಅಂತ ಇದೆ. ಆ ಪ್ರಕಾರ ಅನುಮತಿ ಕೊಡಬಹುದು ಎಂದು ಹೇಳಿದ್ದಾರೆ.