ಶಿವಮೊಗ್ಗ: ನಗರದ ಉದ್ಯಮಿಯೊಬ್ಬರ ಅಕೌಂಟ್‌ಗೆ ಸೈಬರ್ ವಂಚಕರು ಪ್ರತಿ ದಿನ 200 ರೂ. ಹಣ ಹಾಕಿ ಬಳಿಕ 7.84 ಲಕ್ಷ ರೂ. ವಂಚಿಸಿದ್ದಾರೆ.
ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಜಾಹಿರಾತು ನಂಬಿ ಶಿವಮೊಗ್ಗದ ಉದ್ಯಮಿ 20,000 ರೂ. ಹೂಡಿಕೆ ಮಾಡಿದ್ದರು. ಹಣ ಹೂಡಿಕೆ ಮಾಡಿದ ಬಳಿಕ ಸೈಬರ್ ವಂಚಕರು 60 ದಿನಗಳ ಕಾಲ ಲಾಭಾಂಶ ಎಂದು ಪ್ರತಿದಿನ 200 ರೂ. ಹಣ ಹಾಕಿದ್ದಾರೆ. ಬಳಿಕ ಉದ್ಯಮಿಗೆ ಮತ್ತಷ್ಟು ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್ ಕಳ್ಳರು!
ಹಾಗಾಗಿ ಉದ್ಯಮಿ ತನ್ನ ಕುಟುಂಬದವರ ಹೆಸರಿನಲ್ಲಿ 7.84 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆ ಬಳಿಕ ಯಾವುದೇ ಲಾಭ ಬಾರದ ಹಿನ್ನೆಲೆ ಪರಿಶೀಲಿಸಿದಾಗ ವಂಚನೆಯಾಗಿರುವುದು ಅವರಿಗೆ ಅರಿವಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿವೃತ್ತ ಬ್ಯಾಂಕ್ ಅಧಿಕಾರಿಗೆ ಬರೋಬ್ಬರಿ 1 ತಿಂಗಳು ಡಿಜಿಟಲ್ ಅರೆಸ್ಟ್ – 23 ಕೋಟಿ ವಂಚನೆ