ಜೋಗ್‌ ಫಾಲ್ಸ್‌ಗೆ ಬಿದ್ದು ಸಾಯಲು ಬಂದವನ ಮನಪರಿವರ್ತಿಸಿ ಊರಿಗೆ ಕಳಿಸಿದ ಎಸ್ಐ

Public TV
1 Min Read

ಶಿವಮೊಗ್ಗ: ಜೋಗ್ ಫಾಲ್ಸ್‌ಗೆ (Jog Falls) ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಾಪಾರಿಗೆ ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ಬುದ್ಧಿ ಹೇಳಿ ಆತನನನ್ನು ಮರಳಿ ಊರಿಗೆ ಕಳುಹಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಆತ್ಮಹತ್ಯೆಯಿಂದ ವ್ಯಕ್ತಿಯನ್ನು ಪಾರು ಮಾಡಿದವರು. ಇವರು, ಫಾಲ್ಸ್ ಬಳಿ ರೌಂಡ್ಸ್‌ನಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಜೋಗ್ ಫಾಲ್ಸ್ ಬಳಿ ಅತಿ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದರ ಬಗ್ಗೆ ಮಾಹಿತಿ ಪಡೆದಿದ್ದರು. ಆತನ ಬಗ್ಗೆ ಅನುಮಾನ ಬಂದು, ವಿಚಾರಿಸಿದಾಗ ಬೆಂಗಳೂರಿನಲ್ಲಿ (Bengaluru) ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಎನ್ನುವುದು ಗೊತ್ತಾಗಿದೆ. ಇದನ್ನೂ ಓದಿ: ದಾವಣಗೆರೆ | ಶಿಕ್ಷಕನ ಬ್ಯಾಂಕ್ ಖಾತೆಯಿಂದ 22 ಲಕ್ಷ ಎಗರಿಸಿದ್ದ ಆರೋಪಿ ಅರೆಸ್ಟ್

ವ್ಯಾಪಾರದಲ್ಲಿ ನಷ್ಟ, ಪೋಷಕರ ಆರೋಗ್ಯದಲ್ಲಿ ಸಮಸ್ಯೆ, ಕಾರಣ ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಬಗ್ಗೆ ಪೊಲೀಸರ ಬಳಿ ಎಂದು ತಿಳಿಸಿದ್ದ. ಅಲ್ಲದೇ ಸುಮಾರು 20 ದಿನದ ಹಿಂದೆ ಮನೆ ಬಿಟ್ಟು ಬಂದು, ರೈಲು ನಿಲ್ದಾಣ, ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ ಮಾಡಿ ನಂತರ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾಗಿ ವಿವರಿಸಿದ್ದ. ಇದರಿಂದ ಜೋಗ್ ಫಾಲ್ಸ್ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿದ್ದಾಗಿ ‌ಮಾಹಿತಿ‌ ನೀಡಿದ್ದ.

ಆತನಿಗೆ ಧೈರ್ಯ ತುಂಬಿದ ಎಸ್‌ಐ ಅವರನ್ನು ಮನವೊಲಿಸಿ ಪೋಷಕರನ್ನು ಫೋನ್ ಮುಖಾಂತರ ಸಂಪರ್ಕಿಸಿ, ವಾಪಸ್ ಬೆಂಗಳೂರಿನ ಕಳಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು | 2 ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿ ಆತ್ಮಹತ್ಯೆ – ಪತಿ ಅರೆಸ್ಟ್

Share This Article