ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗ್ತಿದೆ, ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ: ವೇದವ್ಯಾಸ್ ಕಾಮತ್

Public TV
2 Min Read

ಮಂಗಳೂರು: ಶಿವಮೊಗ್ಗ (Shivamogga) ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ, ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಜಿಹಾದಿ ಮಾನಸಿಕತೆಯ ಕಿಡಿಗೇಡಿಗಳು ಹಾಗೂ ಸೆಕ್ಯುಲರ್ ಮುಖವಾಡದ ಕಾಂಗ್ರೆಸ್ ಸರ್ಕಾರವೇ (Congress Government) ಇದಕ್ಕೆಲ್ಲ ಕಾರಣ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಘಟನೆ ನಂತರ ಹಿಂದೂಗಳು (Hindu) ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಆತಂಕಪಟ್ಟಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಲ್ಲು ತೂರಾಟ; ಟಿಪ್ಪುವಿನ ಕಾರಣ ಬಲಿಷ್ಠವಾಗಿ ನಿಂತುಬಿಡ್ತು ಅನ್ನಿಸುತ್ತೆ ಎಂದ ಶಾಸಕ

ಕಳೆದ ವಾರ ಗಣೇಶ ವಿಸರ್ಜನೆ ವೇಳೆ ಯಾವುದೇ ಗಲಭೆ ನಡೆದಿರಲಿಲ್ಲ. ಆದ್ರೆ ಈದ್‌ ಮೆರವಣಿಗೆಯಲ್ಲಿ ಕೋಮುದಳ್ಳುರಿ ಹೊತ್ತಿಸಲಾಗಿದೆ. ಇದಕ್ಕೆಲ್ಲ ಕಾರಣ ಜಿಹಾದಿ ಮಾನಸಿಕತೆಯ ಕಿಡಿಗೇಡಿಗಳು ಹಾಗೂ ಸೆಕ್ಯುಲರ್ ಮುಖವಾಡದ ಕಾಂಗ್ರೆಸ್ ಸರ್ಕಾರ. ಔರಂಗಜೇಬನಂತಹ ಮತಾಂಧನ ಬ್ಯಾನರ್ ಅಳವಡಿಸುವುದು, ಕೈಯಲ್ಲಿ ತಲ್ವಾರ್ ಹಿಡಿದು ಪ್ರಚೋದಕಾರಿ ಘೋಷಣೆಗಳನ್ನು ಕೂಗುವುದು, ಕೊನೆಗೆ ಹಿಂದೂಗಳ ಮೇಲೆಯೇ ಕಲ್ಲೆಸೆಯುವುದು ಇವೆಲ್ಲ ವ್ಯವಸ್ಥಿತ ಗಲಭೆಯ ಷಡ್ಯಂತ್ರದ ಭಾಗವಾಗಿದೆ. ಟಿಪ್ಪು ಸುಲ್ತಾನ್‌ ಕಾಲಡಿಯಲ್ಲಿ ಕೇಸರಿ ಬಣ್ಣದ ಪಗಡೆ ತೊಟ್ಟ ವ್ಯಕ್ತಿ ಮಲಗಿರುವ ಕಟೌಟ್‌ ಅಳವಡಿಸಿದ್ದು ವಿವಾದವಾಗುತ್ತಿದ್ದಂತೆ ಸ್ವತಃ ಎಸ್ಪಿ ನೇತೃತ್ವದಲ್ಲಿ ಕಟೌಟ್‌ಗೆ ಬಿಳಿ ಬಣ್ಣ ಬಳಿಯಲಾಗಿತ್ತು. ಹಾಗಾಗಿಯೇ ಕಿಡಿಗೇಡಿಗಳು ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಮಾದರಿಯಲ್ಲಿ ಗಲಭೆಗೆ ಸಂಚು ರೂಪಿಸಿದ್ದಿರಬಹುದು. ಆದರೂ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ ಎನ್‌ಐಎ ತನಿಖೆಯಲ್ಲಿ ಇದೇ ಶಿವಮೊಗ್ಗದ ತೀರ್ಥಹಳ್ಳಿಯ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದು ಗಮನಿಸಬೇಕಾದ ಅಂಶ. ಇವರ ಷಡ್ಯಂತ್ರದ ಎಲ್ಲಾ ಮಾಹಿತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದ್ದರೂ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವುದು ರಾಜ್ಯದ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ – ಕೆಲಕಾಲ ಪರಿಸ್ಥಿತಿ ಉದ್ವಿಗ್ನ

ಈಗಾಗಲೇ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದ ಕೇಸುಗಳನ್ನು ಹಿಂಪಡೆಯುವ ಬಗ್ಗೆ ಕಾಂಗ್ರೆಸ್ ಸರ್ಕಾರವು ತೀರ್ಮಾನಿಸಿದೆ. ಅದಕ್ಕೆ ಪೂರಕವಾಗಿ ಸ್ವತಃ ಗೃಹ ಸಚಿವರೇ ಟಿಪ್ಪಣಿ ಬರೆದಿದ್ದು ಮಾಧ್ಯಮಗಳ ಮೂಲಕ ಪ್ರಸಾರವಾಗಿದೆ. ಸರ್ಕಾರದ ಮಟ್ಟದಲ್ಲಿಯೇ ಇಂತಹ ಕಿಡಿಗೇಡಿಗಳಿಗೆ ವ್ಯವಸ್ಥಿತ ವಾತಾವರಣ ನಿರ್ಮಾಣವಾದಾಗ ಸಹಜವಾಗಿ ಇಂತಹ ಗಲಭೆಗಳು ಹೆಚ್ಚಾಗುತ್ತವೆ. ಏನೇ ಆದರೂ ಈ ಕಾಂಗ್ರೆಸ್ ಸರ್ಕಾರ ನಮ್ಮ ಪರ ಇದೆ ಎಂದುಕೊಂಡು ಗಲಭೆ ಸೃಷ್ಟಿಸಿ ಜನರಲ್ಲಿ ಭಯದ ವಾತಾವರಣ ಮೂಡಿಸುವ ಇಂತಹ ಕಿಡಿಗೇಡಿಗಳಿಗೆ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಹೆಡೆಮುರಿ ಕಟ್ಟಬೇಕು. ಕೂಡಲೇ ಅಲ್ಲಿನ ಹಿಂದೂಗಳ ಹಿತರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್