– ಸಾವಿರ ಪುಟಗಳ ಚಾರ್ಜ್‍ಶೀಟ್‍ನಲ್ಲಿ ಅಚ್ಚರಿ ಸಂಗತಿ
ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಹತ್ಯೆ ಹಿಂದಿನ ಸ್ಫೋಟಕ ರಹಸ್ಯ ಬಟಾಬಯಲಾಗಿದೆ. ಕೊಲೆ ಸಂಬಂಧ ತನಿಖೆ ನಡೆಸಿದ ಎನ್‍ಐಎ 10 ಆರೋಪಿಗಳ ಮೇಲೆ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ. ಸಾವಿರ ಪುಟದ ಚಾರ್ಜ್‍ಶೀಟ್‍ನಲ್ಲಿ ಹತ್ಯೆ ಹಿಂದಿನ ಒಳಸಂಚು ಬಯಲಾಗಿದೆ.
ಹೌದು, ಹರ್ಷ ಹತ್ಯೆ ಹಂತಕರ ಉದ್ದೇಶ ಹಿಂದೂ ಸಂಘಟನೆಯ ಒಬ್ಬರನ್ನ ಹತ್ಯೆ ಮಾಡಿ ಹಿಂದೂ ಸಂಘಟನೆಗಳನ್ನು ಬೆದರಿಸುವುದು. ಹಿಂದೂ ಸಂಘಟನೆಗಳ ಉಪಟಳಕ್ಕೆ ಬ್ರೇಕ್ ಹಾಕಬೇಕು ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ಮಾಡೋದು ಉದ್ದೇಶ ಆಗಿತ್ತಂತೆ. ಆಗ ಹತ್ಯೆಗೆ ಸ್ಕೆಚ್ ಹಾಕಿದ್ದಾಗ ಕಣ್ಣಿಗೆ ಬಿದ್ದದ್ದು ಹರ್ಷ. ಇದನ್ನೂ ಓದಿ: ಖ್ಯಾತ ವೈದ್ಯ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಗುರುರಾಜ್ ಹೆಬ್ಬಾರ್ ನಿಧನ
ಹಳೆಯ ದ್ವೇಷ ಇಟ್ಟುಕೊಂಡಿದ್ದ ಹರ್ಷನನ್ನ ಮುಗಿಸೋಕೆ ಪ್ಲಾನ್ ಮಾಡಿಕೊಂಡಿದ್ದ ಹಂತಕರು, 15 ದಿನಗಳ ಕಾಲ ಹೊಂಚು ಹಾಕಿ ಕೂತಿದ್ರು. ಹರ್ಷನ ಹಿಂದೆ ಹಿಂದೆ ಸುತ್ತಿ ಕೊನೆಗೆ ಹತ್ಯೆ ಮಾಡಿಮುಗಿಸಿದ್ದಾರೆಂದು ಎನ್‍ಐಎ ನ್ಯಾಯಾಲಯಕ್ಕೆ ಸಲ್ಲಿಸಿರೋ ದೋಷಾರೋಪ ಪಟ್ಟಿ ನಮೂದಿಸಲಾಗಿದೆ. ಹರ್ಷ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಹೀಗಾಗಿ ಹರ್ಷನನ್ನು ಕೊಲೆ ಮಾಡಿದ್ರೆ ಹಿಂದೂ ಸಂಘಟನೆಯವರೆಲ್ಲಾ ಹೆದರಿ ತಣ್ಣಗಾಗ್ತಾರೆ ಅನ್ನೋದು ಹಂತಕರ ಉದ್ದೇಶ ಅಂತ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ಹೇಡಿ ಕೊಲೆಗಾರರು ಹಿಂದೂ ಹುಲಿಗಳ ಕೊಂದರೆ ಹಿಂದುತ್ವ ನಾಶ ಆಗಲ್ಲ. ಇದೇ ಆಟ ಮುಂದುವರಿಸಿದರೆ ಅದಕ್ಕೆ ಸರಿಯಾದ ಬೆಲೆ ತೆತ್ತಬೇಕು ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ಎನ್‍ಐಎ ಅಧಿಕಾರಿಗಳು ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 10 ಆರೋಪಿಗಳ ಹೇಳಿಕೆ ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.