ಶಿವಮೊಗ್ಗ ದಸರಾ | ಗಜಪಡೆಗೆ ಆಹ್ವಾನ – ಈ ಬಾರಿ 10 ದಿನಗಳ ಕಾಲ ಸಂಭ್ರಮದ ಉತ್ಸವ

Public TV
1 Min Read

ಶಿವಮೊಗ್ಗ: ನಾಡಹಬ್ಬ ದಸರಾವನ್ನು ಈ ಭಾರಿ ಶಿವಮೊಗ್ಗದಲ್ಲಿ (Shivamogga Dasara) ಅತ್ಯಂತ ವಿಜೃಂಭಣೆಯಿಂದ 10 ದಿನಗಳ ಕಾಲ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ (S.N Channabasappa) ಹೇಳಿದರು. ಮಹಾನಗರ ಪಾಲಿಕೆಯ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಗಜಪಡೆಗೆ ಆಹ್ವಾನ
ದಸರಾ ಮಹೋತ್ಸವದ ವೈಭವವನ್ನು ಹೆಚ್ಚಿಸಲಿರುವ ಗಜಪಡೆಗೆ (Gajapade) ಇಂದು (ಸೆ.20) ಸಕ್ರೆಬೈಲ್‌ನಲ್ಲಿ ಚನ್ನಬಸಪ್ಪ ಅವರು ಆಹ್ವಾನ ನೀಡಿದರು. ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿರುವ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಅದ್ದೂರಿ ಅಂಬಾರಿ ಉತ್ಸವಕ್ಕೆ ಗಜಪಡೆಗಳು ಬರುವುದು ಮತ್ತಷ್ಟೂ ಸಂಭ್ರಮ ಹೆಚ್ಚಿಸಲಿದೆ. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

ಅಂಬಾರಿ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳನ್ನು ಶಿವಮೊಗ್ಗಕ್ಕೆ ತರಲು ಈಗಾಗಲೇ ಅಗತ್ಯವಾದ ಎಲ್ಲಾ ಅನುಮತಿಗಳನ್ನು ಸಂಬಂಧಿತ ಇಲಾಖೆಯಿಂದ ಪಡೆಯಲಾಗಿದೆ. ಸಿಬ್ಬಂದಿ ಹಾಗೂ ತಂಡದ ಸಿದ್ಧತೆಯನ್ನು ಸಂಪೂರ್ಣವಾಗಿ ಖಚಿತಪಡಿಸಲಾಗಿದೆ. ಆನೆಗಳಿಗೆ ತರಬೇತಿ ಹಾಗೂ ಸಿಬ್ಬಂದಿಯ ತರಬೇತಿ ಸಹ ನಡೆದಿದೆ.

ಗಜಪಡೆಗೆ ಆಹ್ವಾನ ನೀಡುವಾಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳು, ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: Mysuru Dasara | ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿ

Share This Article