ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ

Public TV
2 Min Read

ಹಾಸನ: ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು (Lotus) ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ತೋರಿಸಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ಏಕೆ ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda ) ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕಮಲದ ಹೂವಿನ ಚಿತ್ರ ಹಿಡಿದು ಶಾಲಾ ಮಕ್ಕಳು ನೃತ್ಯ ಮಾಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ಕಾರಣಕ್ಕೆ ಮೊದಲ ಬಹುಮಾನ ಪಡೆದ ಶಾಲೆಗೆ ನಾಲ್ಕನೇ ಬಹುಮಾನ ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆಯಲ್ಲಿ (Arsikere) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಇದನ್ನೂ ಓದಿ: ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ನಗರದ ಒಂದು ಶಾಲೆ ನೃತ್ಯ ಮಾಡಿದೆ. ಈ ಸಂದರ್ಭದಲ್ಲಿ  ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ಅಶೋಕ ಸ್ತಂಭದ ಚಿತ್ರಗಳನ್ನ ನೃತ್ಯದಲ್ಲಿ ಉಪಯೊಗಿಸಿದ್ದರು. ಅದರ ಜೊತೆಯಲ್ಲಿ ಕಮಲದ ಹೂವನ್ನೂ ಪ್ರದರ್ಶಿಸಿದ್ದರು. ಈ ವೇಳೆ ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ಹಾಕಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದ್ದು ನಿಜ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ

ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಪ್ರೇಮ,  ಸಂವಿಧಾನ, ರಾಷ್ಟ್ರ ಧ್ವಜ ಇವೆಲ್ಲದರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅಂದು ಪ್ರದರ್ಶಿಸಿದ ನೃತ್ಯಗಳಿಗೆ ಬಹುಮಾನ ವಿತರಿಸುವುದರಲ್ಲಿ ನನ್ನ ಪಾತ್ರವಿಲ್ಲ. ಅದನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ನಾನು ಅಂತಹ ಕೀಳುಮಟ್ಟದ ರಾಜಕಾರಣ ಮಾಡುವವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ

 ಅಂದು ಏನಾಗಿತ್ತು?
ಜ.26 ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರೀಯ ಹೂವು ಕಮಲದ ಹೂವಿನ ಚಿತ್ರವನ್ನು ಹಿಡಿದು ಖಾಸಗಿ ಶಾಲೆಯಾದ ಚಂದ್ರಶೇಖರ ಭಾರತಿ ಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು. ಇದಕ್ಕೆ ಶಾಸಕ ಶಿವಲಿಂಗೇಗೌಡ ಕಮಲದ ಹೂವನ್ನು ಬಹಳ ದೊಡ್ಡ ಪ್ರಮಾಣದಲ್ಲಿ, ಎದ್ದು ಕಾಣುವ ರೀತಿಯಲ್ಲಿ ಹಾಕಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲ ಬಹುಮಾನ ಪಡೆದಿದ್ದ ಶಾಲೆಗೆ ನಾಲ್ಕನೇ ಬಹುಮಾನ ಸಿಗುವಂತೆ ಮಾಡಿದ್ದಾರೆ ಎಂಬ ಆರೋಪ ಸಹ ಅವರ ಮೇಲೆ ಕೇಳಿಬಂದಿತ್ತು. ಇದನ್ನೂ ಓದಿ: ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ – ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?

Share This Article