ಗಾಂಧಿನಗರ: ಗುಜರಾತ್ (Gujarat) ಪೋರ್‌ಬಂದರ್‌ನ (Porbandar) ಸುಭಾಷ್‍ನಗರ ಜೆಟ್ಟಿಯಲ್ಲಿ ಲಂಗರು ಹಾಕಿದ್ದ ಸೊಮಾಲಿಯಕ್ಕೆ (Somalia) ಸರಕು ಸಾಗಿಸುವ ಹಡಗಿಗೆ (Fire Accident) ಬೆಂಕಿ ಹೊತ್ತಿಕೊಂಡಿದೆ.
#WATCH | Gujarat | A ship anchored at Porbandar Subhashnagar Jetty caught fire.
The ship, which belongs to Jamnagar-based HRM & Sons, loaded with rice and sugar, caught fire, and three fire brigade vehicles arrived at the scene. The ship was towed to the middle of the sea as the… pic.twitter.com/30qIN02cv7
— ANI (@ANI) September 22, 2025
ಸೋಮವಾರ (ಸೆ.22) ಮುಂಜಾನೆ ಈ ಅವಘಡ ಸಂಭವಿಸಿದೆ. ಸಮುದ್ರದಲ್ಲಿ ನಿಂತಿದ್ದಾಗ ಬೆಂಕಿ ಹೊತ್ತಿದ್ದು, ಭಾರೀ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಹಡಗನ್ನು ಆವರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಡಗಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು
ಬೆಂಕಿ ತೀವ್ರಗೊಳ್ಳುತ್ತಿದ್ದಂತೆ, ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಯಿತು. ನಂತರ ಅಧಿಕಾರಿಗಳು ಅಕ್ಕಪಕ್ಕದಲ್ಲಿದ್ದ ಬೇರೆ ಹಡಗುಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಲು, ಸಮುದ್ರದದ ಮಧ್ಯಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ. ಈ ಅವಘಡಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ.
ಜಾಮ್‌ನಗರ ಮೂಲದ ಹೆಚ್‌ಆರ್‌ಎಂ & ಸನ್ಸ್ ಒಡೆತನದ ಈ ಹಡಗಿನಲ್ಲಿ ಅಕ್ಕಿ ಮತ್ತು ಸಕ್ಕರೆಯನ್ನು ಲೋಡ್ ಮಾಡಿ ಸೊಮಾಲಿಯಾದ ಬೊಸಾಸೊಗೆ ಕಳುಹಿಸಲಾಗುತ್ತಿತ್ತು. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ