ಶಿಲ್ಪಾ ಶೆಟ್ಟಿ ಹೊಟ್ಟೆಯಲ್ಲಿದ್ದಾಗಲೇ ಗರ್ಭಪಾತಕ್ಕೆ ಸಲಹೆ- ಭಾವುಕರಾದ ನಟಿ

Public TV
1 Min Read

ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಇದೀಗ ‘ಸುಖಿ’ (Sukhee Film) ಸಿನಿಮಾದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈಗ ಶಿಲ್ಪಾ ಶೆಟ್ಟಿ, ಹೊಟ್ಟೆಯಲ್ಲಿದ್ದಾಗ ಗರ್ಭಪಾತ ಮಾಡಿಸುವಂತೆ ಅವರ ತಾಯಿಗೆ ಸಲಹೆ ನೀಡಿದ್ದರ ಬಗ್ಗೆ ನಟಿ ಮಾತನಾಡಿದ್ದಾರೆ. ತಮ್ಮ ಪುನರ್ಜನ್ಮ ಬಗ್ಗೆ ನಟಿ ಭಾವುಕರಾಗಿದ್ದಾರೆ.

ಕರಾವಳಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಈಗ ಬಾಲಿವುಡ್‌ನಲ್ಲಿ (Bollywood) ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. 50ರ ಹರೆಯದಲ್ಲಿ 18ರ ಯುವತಿಯಂತೆ ನಟಿ ಮಿಂಚುತ್ತಿದ್ದಾರೆ. ಇಷ್ಟೇಲ್ಲಾ ನೇಮ್ ಫೇಮ್ ನಡುವೆ ತಾವು ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸಂಕಷ್ಟದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ನನ್ನ ತಾಯಿಯ ಗರ್ಭದಲ್ಲಿ ವೇಳೆ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿ ಗರ್ಭಪಾತ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

ಯಾಕೆಂದರೆ ಅವರಿಗೆ ನಿರಂತರ ರಕ್ತಸ್ರಾವ ಆಗುತ್ತಿತ್ತು. ಆದರೂ ನನ್ನ ತಾಯಿ ಗರ್ಭಪಾತ ಮಾಡಿಸದೇ ದೇವರ ಮೇಲೆ ಭಾರ ಹಾಕಿದ್ದರು. ಅಂದು ಅಂತಹ ಸನ್ನಿವೇಶದಲ್ಲಿ ನಾನು ಹುಟ್ಟಿದೆ. ಇದು ನಿಜಕ್ಕೂ ನನ್ನ ಪುನರ್ಜನ್ಮ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟ ಎದುರಾಗುತ್ತದೆ. ಆದರೆ ನಾವು ಹೇಗೆ ಅದನ್ನ ಎದುರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ.

2021ರಲ್ಲಿ ‘ಹಂಗಾಮ 2’ (Hangama 2) ಚಿತ್ರದ ಬಳಿಕ ಸುಖಿ (Sukhee) ಸಿನಿಮಾದ ಮೂಲಕ ನಟಿ ಹೊಸ ಬಗೆಯ ಕಥೆಯನ್ನ ಹೇಳೋದಕ್ಕೆ ಬಂದಿದ್ದಾರೆ. ಸುಖಿ ಸಿನಿಮಾ ಇದೇ ಸೆ.22ರಂದು ರಿಲೀಸ್ ಆಗುತ್ತಿದೆ.

ಕನ್ನಡದ ಆಟೋ ಶಂಕರ್‌, ಒಂದಾಗೋಣ ಬಾ, ಪ್ರೀತ್ಸೋದ್‌ ತಪ್ಪಾ? ಸಿನಿಮಾಗಳಲ್ಲಿ ಶೆಟ್ಟಿ ನಟಿಸಿದ್ದಾರೆ. ಇದೀಗ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಮೂಲಕ ನಟಿ ಕನ್ನಡ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್