IPL, ದೇಸಿ ಕ್ರಿಕೆಟ್ ಹೀರೋಗಳಿಗೆ ಚಾನ್ಸ್ – ಆಫ್ರಿಕಾ ವಿರುದ್ಧ ಅಬ್ಬರಿಸಿದರೆ, ಟೀಂ ಇಂಡಿಯಾ ಡೋರ್ ಓಪನ್

Public TV
2 Min Read

ಲಕ್ನೋ: ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಏಕದಿನ ಸರಣಿ (ODI) ಇಂದಿನಿಂದ ಆರಂಭವಾಗುತ್ತಿದೆ. ಶಿಖರ್ ಧವನ್ (Shikhar Dhawan) ನೇತೃತ್ವದ ತಂಡ ಬಲಿಷ್ಠ ಆಫ್ರಿಕಾಗೆ ಟಕ್ಕರ್ ನೀಡಲು ಸಿದ್ಧವಾಗಿದೆ.

ಟೀಂ ಇಂಡಿಯಾದ ಬಲಾಢ್ಯ ಆಟಗಾರರು ಟಿ20 ವಿಶ್ವಕಪ್‍ಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ನಡುವೆ ದ್ವಿತೀಯ ಪ್ರಾಶಸ್ತ್ಯದ ತಂಡವನ್ನು ಆಫ್ರಿಕಾ ವಿರುದ್ಧದ ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿತು. ಟಿ20 ವಿಶ್ವಕಪ್‍ಗೆ ಆಯ್ಕೆ ಆಗದಿರುವ ಆಟಗಾರರನ್ನೊಳಗಂಡ ತಂಡವನ್ನು ಬಿಸಿಸಿಐ (BCCI) ಆಯ್ಕೆ ಸಮಿತಿ ಕಟ್ಟಿದ್ದು, ಅನುಭವಿ ಶಿಖರ್ ಧವನ್‍ಗೆ ನಾಯಕತ್ವದ ಪಟ್ಟ ಕಟ್ಟಿದೆ. ಇದನ್ನೂ ಓದಿ: ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಆಸ್ಪತ್ರೆಗೆ ದಾಖಲು

ಇದೀಗ ಆಯ್ಕೆಗೊಂಡಿರುವವರ ಪೈಕಿ ಬಹುತೇಕ ಆಟಗಾರರು ಐಪಿಎಲ್ ಮತ್ತು ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಾಗಿದ್ದಾರೆ. ಹಾಗಾಗಿ ಟೀಂ ಇಂಡಿಯಾ ಪರ ಆಡುವ ಅವಕಾಶ ದೊರೆದಿದೆ. ಸದ್ಯ ತಂಡದಲ್ಲಿರುವವರ ಪೈಕಿ ರಜತ್ ಪಾಟಿದಾರ್, ಮುಖೇಶ್ ಕುಮಾರ್ ಮತ್ತು ಶಹಬಾದ್ ಅಹ್ಮದ್ ಹೊಸ ಮುಖಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ರಜತ್ ಪಾಟಿದಾರ್ ಮತ್ತು ಶಹಬಾದ್ ಅಹ್ಮದ್ ಐಪಿಎಲ್‍ನಲ್ಲಿ RCB ಪರ ಧೂಳೆಬ್ಬಿಸಿದ್ದರು. ಮುಖೇಶ್ ಕುಮಾರ್ ದೇಸಿ ಟೂರ್ನಿಗಳಲ್ಲಿ ಉತ್ತಮ ಆಟದ ಮೂಲಕ ಟೀಂ ಇಂಡಿಯಾ ಪ್ರವೇಶ ಪಡೆದಿದ್ದಾರೆ. ಇವರೊಂದಿಗೆ ಈಗಾಗಲೇ ಭಾರತ ಪರ ಆಡಿ ಅನುಭವವುಳ್ಳ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಇದೀಗ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಮಿಂಚಿದರೆ, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಖಾಯಂ ಸದಸ್ಯರಾಗುವ ಅವಕಾಶವೊಂದು ಬಂದೊದಗಿದೆ. ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ

ಟೀಂ ಇಂಡಿಯಾ:
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭ್‍ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

ದಕ್ಷಿಣ ಆಫ್ರಿಕಾ:
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಜನ್ನೆಮನ್ ಮಲನ್, ಐಡೆನ್ ಮಾಕ್ರ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‍ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಎ ಡಿಲೆ ಫೆಹ್ಲುಕ್ವಾಯೊಸ್, ಪೆಟ್ರಿಯಸ್‌, ಪ್ರಿಟೋರಿಡಾ , ತಬ್ರೈಜ್ ಶಮ್ಸಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *