ನಗರಸಭೆಗೆ ಬೆಂಕಿ ಹಾಕಿಸುತ್ತೇನೆ – ಶಿಡ್ಲಘಟ್ಟ ಪೌರಾಯುಕ್ತೆಗೆ ಕೈ ನಾಯಕನಿಂದ ಜೀವ ಬೆದರಿಕೆ

1 Min Read

ಚಿಕ್ಕಬಳ್ಳಾಪುರ: ಅನಧಿಕೃತವಾಗಿ ಹಾಕಿದ್ದ ಒಂದು ಬ್ಯಾನರ್‌ (Banner) ಅನ್ನು ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ(Shidlaghatta) ನಗರಸಭೆ ಪೌರಾಯುಕ್ತೆ ಅಮೃತಾ ಗೌಡ (Amrutha Gowda) ಅವರಿಗೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ (Rajeev Gowda) ಬೆದರಿಕೆ ಹಾಕಿದ್ದಾರೆ.

ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಸಚಿವ ಜಮೀರ್‌ ಅಹ್ಮದ್‌ ಅವರ ಪುತ್ರ ಝೈದ್‌ ಖಾನ್‌ ಅವರ ಕಲ್ಟ್‌ ಸಿನಿಮಾಗೆ ಸಂಬಂಧಿಸಿದ ಬ್ಯಾನರ್‌ ಅನ್ನು ಶಿಡ್ಲಘಟ್ಟ ನಗರದಲ್ಲಿ ಹಾಕಿದ್ದರು.  ಇದನ್ನೂ ಓದಿ:  ತೆಲಂಗಾಣದಲ್ಲಿ 500 ಬೀದಿನಾಯಿಗಳ ಸಾಮೂಹಿಕ ಹತ್ಯೆ

ರಸ್ತೆ ಮಧ್ಯೆ ಹಾಕಿದ ಒಂದು ಬ್ಯಾನರ್‌ನಿಂದ ಅಪಘಾತ ನಡೆದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಅನ್ನು ತೆರವು ಮಾಡಲಾಗಿತ್ತು. ಈ ಬ್ಯಾನರ್‌ ಅನ್ನು ತೆರವು ಮಾಡಿದ್ದಕ್ಕೆ ಸಿಟ್ಟಾದ ರಾಜೀವ್ ಗೌಡ ಅವರು ಅಮೃತಾ ಗೌಡ ಅವರನ್ನು ಫೋನಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಪ್ಪಲಿಯಲ್ಲಿ ಹೊಡೆಸಿ ನಗರಸಭೆಗೆ ಬೆಂಕಿ ಹಾಕಿಸುತ್ತೇನೆ. ದಂಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡನ ಬೆದರಿಕೆಗೆ ಭಯಭೀತರಾದ ಸಿಬ್ಬಂದಿ ಇಂದು ನಗರಸಭೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

 

Share This Article