ಶಿಡ್ಲಘಟ್ಟ ಕೇಸ್ | ರಾಜೀವ್‌ಗೌಡ ಮಾತನಾಡಿದ್ದು ಸರಿಯಲ್ಲ, ಕರೆದು ಬುದ್ಧಿ ಹೇಳ್ತಿನಿ: ಕೆ.ಹೆಚ್.ಮುನಿಯಪ್ಪ

1 Min Read

-ಪೌರಾಯುಕ್ತೆ JDS ಬ್ಯಾನರ್ ತೆಗೆಸಿಲ್ಲ, ಕಾಂಗ್ರೆಸ್‌ನದ್ದು ಮಾತ್ರ ತೆಗೆದಿದ್ದಾರೆ ಅಂತ ರಾಜೀವ್‌ಗೌಡ ವಾದ ಮಾಡ್ತಿದ್ದಾರೆ

ಬೆಂಗಳೂರು/ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪ್ರಕರಣದಲ್ಲಿ ರಾಜೀವ್ ಗೌಡ ಹೇಳುವ ಪ್ರಕಾರ ಜೆಡಿಎಸ್‌ನ (JDS) ಪೋಸ್ಟರ್, ಬ್ಯಾನರ್‌ಗಳನ್ನ ಆ ಅಧಿಕಾರಿ ತೆಗೆಸುತ್ತಿಲ್ಲ, ಕೇವಲ ಕಾಂಗ್ರೆಸ್‌ನದ್ದು (Congress) ಮಾತ್ರ ತೆಗೆದಿದ್ದಾರೆ ಅಂದಿದ್ದಾರೆ. ಆದರೂ ರಾಜೀವ್‌ಗೌಡ ಮಾತನಾಡಿದ್ದು ಸರಿಯಲ್ಲ, ಕರೆದು ಬುದ್ಧಿ ಹೇಳ್ತಿನಿ ಎಂದು ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ತಿಳಿಸಿದ್ದಾರೆ.

ಬೆಂಗಳೂರಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ರಾಜೀವ್‌ಗೌಡ ಬಡವರಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾನೆ. 10 ವರ್ಷದಲ್ಲಿ ಒಂದೇ ಒಂದು ದಿನ ಇಂತಹ ಅಚಾತುರ್ಯ ಅವನಲ್ಲಿ ಕಾಣಲಿಲ್ಲ. ಆದರೆ ಈಗ ಭಾವನೆಗೆ ಒಳಗಾಗಿ ಹೀಗೆ ಮಾತನಾಡಿದ್ದಾನೆ, ಆದರೆ ಮಾತನಾಡಿದ್ದು ಸರಿಯಿಲ್ಲ. ಇದೇ ಫರ್ಸ್ಟ್ & ಲಾಸ್ಟ್. ಹೀಗೆ ಮಾತಾಡಬಾರದು. ಹತ್ತು ವರ್ಷದಲ್ಲಿ ಇಷ್ಟೆಲ್ಲ ಕೆಲಸ ಮಾಡಿ, ಈಗ ಮನಸ್ಸಿಗೆ ನೋವು ಮಾಡಿದ್ದಾನೆ. ಕರೆದು ಬುದ್ಧಿ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಮೃತಗೌಡಗೆ ಬೆದರಿಕೆ – 2 ಫೋನ್‌ ಸ್ವಿಚ್‌ ಆಫ್‌ ಮಾಡಿ ಕೈ ನಾಯಕ ರಾಜೀವ್‌ ಗೌಡ ಪರಾರಿ

ರಾಜೀವ್‌ಗೌಡ ನನಗೆ ಮಾತಿಗೆ ಸಿಕ್ಕಿಲ್ಲ, ಅವರ ಶ್ರೀಮತಿಗೆ ಕರೆ ಮಾಡಿ ಬುದ್ಧಿ ಹೇಳಿದ್ದೇನೆ. ರಾಜೀವ್‌ಗೌಡ ಸೌಮ್ಯ ಸ್ವಭಾವದವರು, ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಹೀಗೆ ಮಾತನಾಡಬಾರದು. ಕೂಲಂಕುಷವಾಗಿ ಯೋಚಿಸಬೇಕು, ಸುಸಂಸ್ಕೃತರು ಹೀಗೆಲ್ಲ ಮಾತನಾಡಬಾರದು ಎಂದು ಹೇಳಿದ್ದಾರೆ.

Share This Article