ರಾಹುಲ್ ಮದ್ವೆಯಾಗ್ತೀನಿ – ಒಂದು ಷರತ್ತು ಪಾಲಿಸಬೇಕು ಎಂದ ಶೆರ್ಲಿನ್ ಚೋಪ್ರಾ

Public TV
1 Min Read

ಬಾಲಿವುಡ್ (Bollywood) ಬ್ಯೂಟಿ ಶೆರ್ಲಿನ್ ಚೋಪ್ರಾ (Sherlyn Chopra) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ರಾಜ್ ಕುಂದ್ರಾ ನೀಲಿ ಸಿನಿಮಾ ಬಗ್ಗೆ ಶೆರ್ಲಿನ್ ಚೋಪ್ರಾ ಗುಡುಗಿದ್ದರು. ಬಳಿಕ ರಾಕಿ ಸಾವಂತ್ ಜೊತೆ ಶೆರ್ಲಿನ್ ಕಿತ್ತಾಡಿಕೊಂಡಿದ್ದರು ಆಮೇಲೆ ಒಂದಾದರು. ಈಗ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi)  ಅವರ ಜೊತೆಗಿನ ಮದುವೆ ಬಗ್ಗೆ ನಟಿ ಮಾತನಾಡಿದ್ದಾರೆ. ಒಂದು ಷರತ್ತು ಕೂಡ ಮುಂದಿಟ್ಟಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ವಯಸ್ಸು 53 ಆದರೂ ಮದುವೆಯಾಗದೇ ಒಂಟಿಯಾಗಿಯೇ ಇದ್ದಾರೆ. ಇದೀಗ ರಾಹುಲ್ ಗಾಂಧಿ ಮದುವೆ ಬಗ್ಗೆ ಶೆರ್ಲಿನ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಪಾಪರಾಜಿಗಳ ಪ್ರಶ್ನೆಗೆ ನಟಿ ತಮಾಷೆಯಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:ನಿರ್ಮಾಪಕ ಕರಣ್ ಜೋಹರ್ ಜೊತೆ ಕೈಜೋಡಿಸಿದ ಸಲ್ಮಾನ್ ಖಾನ್

ಆಗಾಗ್ಗೆ ಪಾಪರಾಜಿಗಳ ಕಣ್ಣಿಗೆ ಬೀಳುವ ಶೆರ್ಲಿನ್ ಚೋಪ್ರಾ ಈ ಬಾರಿ ಬಾಂದ್ರಾ ಮುಂಬೈ ಬಾಂದ್ರಾದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದಾಗ, ಪಾಪರಾಜಿ ಒಬ್ಬರು ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೀರಾ ಎಂದು ಫನ್ನಿಯಾಗಿ ಇದಕ್ಕೆ ಶೆರ್ಲಿನ್ ಪ್ರತಿಕ್ರಿಯೆ ನೀಡಿದ್ದು, ಹೌದು, ವೈ ನಾಟ್. ಆದರೆ ಮದುವೆಯ ನಂತರ ನನ್ನ ಸರ್‌ನೇಮ್ ಅನ್ನು ನಾನು ಬದಲಿಸಲ್ಲ ಎಂದು ಹೇಳಿದ್ದಾರೆ.

ಶೆರ್ಲಿನ್ ಚೋಪ್ರಾ ಅವರ ಆಡಿರುವ ಮಾತು ಸಖತ್ ವೈರಲ್ ಆಗಿದ್ರೂ ಕೂಡ ರಾಹುಲ್ ಗಾಂಧಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶೆರ್ಲಿನ್ ಮಾತು ಕೇಳಿ ಫ್ಯಾನ್ಸ್ ಈ ಬಗ್ಗೆ ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್