ಕನಸಿನ ಕೋರ್ಸ್‌ಗಾಗಿ ಲಂಡನ್‌ಗೆ ಹೊರಟಿದ್ದ ಯುವತಿಯ ದುರಂತ ಅಂತ್ಯ!

Public TV
1 Min Read

ಅಹಮದಾಬಾದ್: ಲಂಡನ್‌ನಲ್ಲಿ ತನ್ನ ಇಷ್ಟದ ಕೋರ್ಸ್‌ ಮಾಡಲು ಹೊರಟಿದ್ದ ಪಾಯಲ್ ಖಾಟಿಕ್ ಅವರ ಕನಸು ಕೇವಲ 9 ಗಂಟೆಗಳ ಹಾರಾಟದ ದೂರದಲ್ಲಿತ್ತು! ಆದರೆ ಅವರ ಕನಸು, ಅವರ ದೇಹ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸುಟ್ಟು ಬೂದಿಯಾಯಿತು.

ರಾಜಸ್ಥಾನದ ಉದಯಪುರದ ಯುವತಿ ಪಾಯಲ್, ಲಂಡನ್‌ಗೆ ತೆರಳಲು ಅಹಮದಾಬಾದ್‌ನಿಂದ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಆ ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಈ ದುರಂತದಲ್ಲಿ ಅವರು ಸಾವಿಗೀಡಾಗಿದ್ದಾರೆ.

ಗುಜರಾತ್‌ನ ಹಿಮ್ಮತ್‌ನಗರದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಪಾಯಲ್, ಲಂಡನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಹೋಗುತ್ತಿದ್ದರು. ಸ್ಥಳೀಯರು, ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಮೂಲಗಳ ಪ್ರಕಾರ 200ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.

Share This Article