ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಕಷ್ಟದ ದಿನಗಳ ಎದುರಿಸಿದೆ: ನಟಿ ಪ್ರಿಯಾಂಕಾ

Public TV
1 Min Read

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತೊಂದು ಬಾರಿ ಕಣ್ಣೀರು ಹಾಕಿದ್ದಾರೆ. ಸಿನಿಮಾ ರಂಗಕ್ಕೆ ಹೊಸದಾಗಿ ಬಂದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ದಿನಗಳ ನೆಮ್ಮದಿಯ ದಿನಗಳು ಆಗಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತುಂಬಾ ಸಲ ಕಣ್ಣೀರು ಕೂಡ ಹಾಕಿರುವುದಾಗಿ ಹೇಳಿದ್ದಾರೆ.

ಸಿನಿಮಾ ರಂಗಕ್ಕೆ ಬಂದಾಗ ಅವಮಾನಿಸುತ್ತಿದ್ದರು, ಪಾತ್ರಗಳಿಗೆ ಆಯ್ಕೆ ಮಾಡುತ್ತಿರಲಿಲ್ಲ. ಕೊಟ್ಟ ಪಾತ್ರವನ್ನು ಸರಿಯಾಗಿ ನಿಭಾಯಿಸೋಕೆ ಬಿಡುತ್ತಿರಲಿಲ್ಲ. ಎಷ್ಟೋ ಸಲ ಮನೆಗೆ ಬಂದಿದ್ದು ಅತ್ತಿದ್ದೇನೆ. ಈ ರಂಗಕ್ಕೆ ಯಾಕಾದರೂ ಬಂದೆ ಎಂದು ನೊಂದಿದ್ದೇನೆ. ಅಷ್ಟೊಂದು ಕಷ್ಟದಾಯಕ ಸಮಯವದು ಎಂದಿದ್ದಾರೆ.

 

ಕೆಲವು ನಟರ ತಮ್ಮ ಗರ್ಲ್ ಫ್ರೆಂಡ್ ಗಾಗಿ ನನ್ನ ಪಾತ್ರಗಳನ್ನು ಕಸಿದುಕೊಳ್ಳುತ್ತಿದ್ದರು. ಅದು ಮತ್ತೊಂದು ರೀತಿಯ ಹಿಂಸೆ ಆಗಿರುತ್ತಿತ್ತು. ಎಲ್ಲವನ್ನೂ ಸಂಯಮದಿಂದ ನಿಭಾಯಿಸಿಕೊಂಡು ಬಂದೆ. ನಂತರದ ದಿನಗಳಲ್ಲಿ ಅವೆಲ್ಲವೂ ದೂರವಾದವು. ಎಲ್ಲರೂ ನಾನು ಸುಖವಾಗಿ ಜೀವನ ನಡೆಸಿದೆ ಎಂದುಕೊಂಡಿದ್ದಾರೆ. ಅದೆಲ್ಲವೂ ಸುಳ್ಳು. ನಾನೂ ಕಷ್ಟ ಪಟ್ಟಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

Share This Article