ಶತಾವಧಾನಿ ಗಣೇಶ್​​ಗೆ​​ ಪದ್ಮ ಭೂಷಣ, ರಾಜ್ಯದ 7 ಮಂದಿಗೆ ಪದ್ಮಶ್ರೀ

1 Min Read

ನವದೆಹಲಿ: ಕರ್ನಾಟಕದ 8 ಮಂದಿಗೆ 2026ನೇ ಸಾಲಿನ ಪದ್ಮ ಪ್ರಶಸ್ತಿ ಲಭಿಸಿದೆ. ಶತಾವಧಾನಿ ಗಣೇಶ್‌ (Shatavadhani Ganesh) ಅವರಿಗೆ ಕಲೆ ವಿಭಾಗದಲ್ಲಿ ಪದ್ಮಭೂಷಣ (Padma Bhushan)  ಗೌರವಕ್ಕೆ ಪಾತ್ರರಾಗಿದ್ದಾರೆ.

ಒಟ್ಟು 5 ಮಂದಿಗೆ ಪದ್ಮವಿಭೂಷಣ, 13 ಮಂದಿಗೆ ಪದ್ಮಭೂಷಣ, 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಕೇಂದ್ರ ಸರ್ಕಾರ ಘೋಷಿಸಿದೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.  ಇದನ್ನೂ ಓದಿ: ಬೆಂಗಳೂರಿನ ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ

ಪುಸ್ತಕ ಪ್ರೇಮಿ ಅಂಕೆ ಗೌಡ ಎಂ(ಸಮಾಜ ಸೇವೆ), ಅಲರ್ಜಿ ತಜ್ಞೆ ಡಾ.ಶುಭ ವೆಂಕಟೇಶ ಅಯ್ಯಂಗಾರ್ (ವಿಜ್ಞಾನ), ಟಿಟಿ ಜಗನ್ನಾಥನ್ (ಕೈಗಾರಿಕೆ), ಪ್ರಭಾಕರ ಕೋರೆ (ಶಿಕ್ಷಣ), ಎಸ್‌ಜಿ ಸುಶೀಲಮ್ಮ(ಸಮಾಜ ಸೇವೆ), ಶಶಿ ಶೇಖರ್ ವೆಂಪತಿ(ಶಿಕ್ಷಣ), ಸುರೇಶ್ ಹನಗವಾಡಿ (ವೈದ್ಯಕೀಯ)  ಅವರು ಪದ್ಮಶ್ರೀ  ಪ್ರಶಸ್ತಿ ಲಭಿಸಿದೆ.  ಇದನ್ನೂ ಓದಿ: KLE ಕಾರ್ಯಾಧ್ಯಕ್ಷ ಸ್ಥಾನದಿಂದ ಪ್ರಭಾಕರ ಕೋರೆ ನಿರ್ಗಮನ
ಗಣರಾಜ್ಯೋತ್ಸವದ ಮುನ್ನಾದಿನ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ಪಡೆದ ಐವರಲ್ಲಿ ಬಾಲಿವುಡ್‌ನ ‘ಹೀ-ಮ್ಯಾನ್’ ಧರ್ಮೇಂದ್ರ, ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಸೇರಿದ್ದಾರೆ. ಇದನ್ನೂ ಓದಿ: ಹಿಮೋಫಿಲಿಯಾ ವಿರುದ್ಧ ಹೋರಾಟ – ಡಾ.‌ಸುರೇಶ್ ಹನಗವಾಡಿಗೆ ಪದ್ಮಶ್ರೀ
ನಟ ಮಮ್ಮುಟ್ಟಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ (ಮರಣೋತ್ತರ), ಅಡ್ಮನ್ ಪಿಯೂಷ್ ಪಾಂಡೆ (ಮರಣೋತ್ತರ), ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್, ಗಾಯಕಿ ಅಲ್ಕಾ ಯಾಗ್ನಿಕ್, ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತರಾಜ್, ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ ಸೇರಿದಂತೆ 13 ಮಂದಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಇದನ್ನೂ ಓದಿ: ʻಕನ್ನಡದ ಜ್ಞಾನ ದಾಸೋಹಿʼ ಮಂಡ್ಯದ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಗರಿ
ಕ್ರಿಕೆಟಿಗ ರೋಹಿತ್ ಶರ್ಮಾ, ಜೆಎನ್‌ಯು ಮಾಜಿ ಉಪಕುಲಪತಿ ಜಗದೀಶ್ ಕುಮಾರ್ ಸೇರಿದಂತೆ 113 ಮಂದಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
Share This Article