ತಿರುವನಂತಪುರಂ: ಕೇರಳದಲ್ಲಿ (Kerala) ಪ್ರಧಾನಿ ಮೋದಿ ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಕಚ್ಚಾಟ ಮುಂದುವರಿದಿದೆ. ತಿರುವನಂತಪುರದ ಸಂಸದರೂ ಆಗಿರುವ ಶಶಿ ತರೂರ್ (Shashi Tharoor) ಕಾಂಗ್ರೆಸ್‌ನಿಂದ (Congress) ಮತ್ತಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಕೇರಳ ಚುನಾವಣೆ ಹಿನ್ನೆಲೆ ರಾಹುಲ್ ಗಾಂಧಿ ಕರೆದಿದ್ದ ಮಹತ್ವದ ಸಭೆಗೆ ಶಶಿ ತರೂರ್ ಗೈರಾಗಿ ಬಂಡಾಯ ಸಾರಿದಂತಿದೆ.
ಇವತ್ತು ದೆಹಲಿಯಲ್ಲಿ ರಾಹುಲ್ ಗಾಂಧಿಯ ಪ್ರಮುಖ ಸಭೆ ಇದ್ದರೂ ಮೋದಿ ಬರ್ತಾರೆ ಅಂತ ತಮ್ಮ ಸ್ವಕ್ಷೇತ್ರದಲ್ಲೇ ಉಳಿದಿದ್ದರು. ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು ಬಯಸಿದ್ದರು ಅಂತ ಕಾಂಗ್ರೆಸ್ ಮೂಲಗಳು ಹೇಳಿವೆ. ಆದರೆ, ಮೋದಿ ರ‍್ಯಾಲಿಯಲ್ಲಿ ಶಶಿ ತರೂರ್ ಇರಲಿಲ್ಲ. ಅಂದಹಾಗೆ, ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಕೊಚ್ಚಿಗೆ ಬಂದಿದ್ದಾಗ ತರೂರ್‌ಗೆ ಸರಿಯಾಗಿ ಗೌರವ ಕೊಡಲಿಲ್ಲ. ರಾಹುಲ್ ಬರುವ ಸಮಯ ಆಗಿದೆ ಬೇಗ ಭಾಷಣ ಮುಗಿಸಿ ಅಂತ ತರೂರ್‌ಗೆ ಹೇಳಿದ್ದರಿಂದ ಮುನಿಸಿಕೊಂಡಿದ್ದಾರೆ ಅಂತ ತಿಳಿದು ಬಂದಿದೆ. ಇದನ್ನೂ ಓದಿ: ತಲೆಗೆ ಲಕ್ಷ ಲಕ್ಷ ಬಹುಮಾನ ಘೋಷಣೆಯಾಗಿದ್ದ 9 ನಕ್ಸಲರು ಶರಣು
ಇನ್ನು ಎಡಪಕ್ಷದ ಮುಷ್ಠಿಯಲ್ಲಿದ್ದ ತಿರುವನಂತಪುರಂ ಕಾರ್ಪೊರೇಷನ್ ಗೆದ್ದಿದ್ದ ಬಿಜೆಪಿಗೆ ಶಶಿ ತರೂರ್ ಹೊಗಳಿ ಪಕ್ಷದ ಕೆಂಗಣ್ಣಿಗೂ ಗುರಿಯಾಗಿದ್ದರು. ಇದನ್ನೂ ಓದಿ: ಕುಡಿದು ವಾಹನ ಚಾಲನೆ – 11,500 ಚಾಲಕರ ಡಿಎಲ್ ರದ್ದು

