ಟಿವಿ ಚರ್ಚೆಗೆ ಮೋದಿಯನ್ನು ಆಹ್ವಾನಿಸಿದ್ದ ಪಾಕ್ ಪ್ರಧಾನಿಗೆ ಖಡಕ್ ಉತ್ತರ ಕೊಟ್ಟ ಕಾಂಗ್ರೆಸ್‌ ಸಂಸದ

Public TV
2 Min Read

ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿವಿಯಲ್ಲಿ ಚರ್ಚೆ ನಡೆಸಲು ಬಯಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ನೀಡಿದ್ದರು. ಆದರೆ ಈ ಕುರಿತಾಗಿ ಹಲವು ನಾಯಕರು ಟ್ವೀಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಎರಡು ದಿನಗಳ ಮಾಸ್ಕೋ ಭೇಟಿಗೆ ಮುಂಚಿತವಾಗಿ ರಷ್ಯಾದ ದೂರದರ್ಶನವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್, ನರೇಂದ್ರ ಮೋದಿ ಅವರೊಂದಿಗೆ ಟಿವಿಯಲ್ಲಿ ಚರ್ಚೆ ಮಾಡಲು ನಾನು ಇಷ್ಟಪಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದರು.  ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಟಾಂಗ್‌ ಕೊಟ್ಟಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಪ್ರೀತಿಯ ಇಮ್ರಾನ್ ಖಾನ್ ಯುದ್ಧ-ಯುದ್ಧ ಎಂದು ಹೇಳುವುದಕ್ಕಿಂತ ಮಾತುಕತೆ ಉತ್ತಮವಾಗಿದೆ. ಆದರೆ ಭಾರತೀಯ ದೂರದರ್ಶನ ಚರ್ಚೆಗಳಲ್ಲಿ ಯಾವುದೇ ಸಮಸ್ಯೆಗಳು ಎಂದಿಗೂ ಪರಿಹರಿಸಲ್ಪಡುವುದಿಲ್ಲ, ಕೇವಲ ಉಲ್ಬಣಗೊಳ್ಳುತ್ತವೆ ಮತ್ತು ನಮ್ಮ ಕೆಲವು ಆ್ಯಂಕರ್‌ಗಳು ತಮ್ಮ ಟಿಆರ್‌ಪಿಗಳನ್ನು ಹೆಚ್ಚಿಸಿದರೆ ಮೂರನೇ ಮಹಾಯುದ್ಧವನ್ನು ಪ್ರಚೋದಿಸಿದಷ್ಟು ಸಂತೋಷಪಡುತ್ತಾರೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

ನಿಜವಾಗಿಯೂ ಟಿವಿ ಚರ್ಚೆಯು ಪಾಕ್ ಪ್ರಾಯೋಜಿತವಾಗಿದೆ. ಭಯೋತ್ಪಾದನೆಯ ನಿಲುಗಡೆಗೆ ಹೇಗೆ ಕಾರಣವಾಗುತ್ತದೆ ಎಂದು ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

Share This Article
Leave a Comment

Leave a Reply

Your email address will not be published. Required fields are marked *