ಶಾರುಖ್‌ಗೆ ಡಬಲ್ ಧಮಾಕಾ- ಗೆಲುವಿನ ಟ್ರ್ಯಾಕ್‌ಗೆ ಮರಳಿದ ಬಾದ್‌ಶಾ

By
1 Min Read

ಶಾರುಖ್ ಖಾನ್ (Sharukh Khan) ಖುಷಿಗೆ ಮಿತಿಯೇ ಇಲ್ಲ. ವರ್ಷದೊಳಗೆ ಎರಡೆರಡು ಬ್ಲಾಕ್‌ಬಸ್ಟರ್ ಹಿಟ್. 7 ವರ್ಷಗಳಿಂದ ಚಪ್ಪಾಳೆಯ ಸದ್ದನ್ನೇ ಕೇಳಿರದ ಕಿಂಗ್ ಖಾನ್ ಆ ದಿನಗಳಲ್ಲಿ ಅನುಭವಿಸಿದ್ದ ಯಾತನೆ ಬಿಚ್ಚಿಟ್ಟಿದ್ದಾರೆ. ಜವಾನ್ ಸಕ್ಸಸ್‌ಮೀಟ್‌ನಲ್ಲಿ ಕಿಂಗ್ ಖಾನ್ ಭಾವುಕ ನುಡಿ. ಇದನ್ನೂ ಓದಿ:‘ಫುಲ್ ಮೀಲ್ಸ್’ ಚಿತ್ರತಂಡದಿಂದ ನಾಯಕಿಗೆ ವಿಶೇಷ ಉಡುಗೊರೆ

ಒಂದೇ ವರ್ಷ 2 ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ. ಬಾದ್‌ಶಾ ಶಾರುಖ್ ಖಾನ್ ಮತ್ತೆ ಹಳೇ ಚಾರ್ಮ್‌ಗೆ ಮರಳಿದ್ದಾರೆ. ಜವಾನ್ (Jawan Film) ಭರ್ತಿ 700 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಕಿಂಗ್ ಖಾನ್ ಸಕ್ಸಸ್ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಯಾವ ಪೀಕ್‌ಲ್ಲಿ ಅಂದ್ರೆ ಪಾರ್ಟಿಯಲ್ಲಿ ನೆಲದ ಮೇಲೆ ಮಲಗಿ ಕ್ಯಾಮೆರಾಗೆ ಪೋಸ್ ಕೊಡುವಷ್ಟು! ಯಾಕಂದ್ರೆ ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ 3 ವರ್ಷ ಸಿನಿ ಅಜ್ಞಾತವಾಸ ಅನುಭವಿಸಿದ್ದರು. ಆ ಪರಿಸ್ಥಿತಿಯಿಂದ ಹೇಗೆ ಹೊರಬಂದ್ರು. ಸಂಕಟ ಕಮ್ಮಿ ಮಾಡಲು ಸಹಕರಿಸಿದ್ದು ಯರ‍್ಯಾರು ಎಲ್ಲವನ್ನೂ ಜವಾನ್ ಸಕ್ಸಸ್ ಪಾರ್ಟಿಯಲ್ಲಿ ಶಾರುಖ್ ಮನಬಿಚ್ಚಿದ್ದಾರೆ.

ಮುಂಬೈನಲ್ಲಿ ಅದ್ದೂರಿಯಾಗಿ ‘ಜವಾನ್’ ಸಕ್ಸಸ್ ಪಾರ್ಟಿ ನಡೆದಿದೆ. ದೀಪಿಕಾ (Deepika Padukone) ಸಮೇತವಾಗಿ ಪ್ರತಿಯೊಬ್ಬರೂ ಭಾಗಿಯಾಗಿದ್ರು. ನಯನತಾರಾ (Nayanatara) ಮಾತ್ರಾ ಮಿಸ್ಸಿಂಗ್ ಅನ್ನೋದನ್ನ ಬಿಟ್ರೆ ಶಾರುಖ್ ಎಲ್ಲರನ್ನೂ ವೇದಿಕೆಗೆ ಕರೆಸಿದ್ರು. ಈ ಸೆಲ್ಫ್ ಮೇಡ್ ಶಹಜಾದಾ ಪಠಾಣ್ (Pathaan) ಸಿನಿಮಾದ ಬಳಿಕ ಮತ್ತೊಂದು ಹಿಟ್ ಕೊಟ್ಟಿದ್ದಾರೆ.

ಇಂಥಹ ಎಷ್ಟೋ ದಾಖಲೆಗಳನ್ನ ಶಾರುಖ್ (Sharukh Khan) ಉಡೀಸ್ ಮಾಡಿರುವ ಹಿನ್ನೆಲೆ ಇದ್ದರೂ ಕೂಡ ಶಾರುಖ್ ಚೆನೈ ಎಕ್ಸ್‌ಪ್ರೈಸ್ (Chennai Express) ಬಳಿಕ ಸೋಲಿನ ರಾಶಿಯಲ್ಲಿ ಮುಳುಗಿ ಸುಸ್ತಾಗಿದ್ರು. ಕೊನೆಗೂ ಒಂದರಮೇಲೊಂದು ಚಿತ್ರ ಯಶಸ್ಸಿನ ಹಾದಿ ಹಿಡಿಯುತ್ತಿರೋದ್ರಿಂದ ಶಾರುಖ್ ಮತ್ತೆ ಬಾದ್‌ಶಾ ಗದ್ದುಗೆಗೆ ಮರಳಿದ್ದಾರೆ. ಇದೇ ಖುಷಿಯಲ್ಲೇ ಜವಾನ್ ಸಕ್ಸಸ್‌ಮೀಟ್‌ನಲ್ಲಿ ಶಾರುಖ್ ಫ್ಲ್ಯಾಶ್‌ ಬ್ಯಾಕ್ ಕಥೆಯನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್