‘ಗೀತಾ’ ನಟಿ ಶರ್ಮಿತಾ ಮೈ ಮೇಲೆ ಹೆಬ್ಬಾವು

Public TV
1 Min Read

ಕಿರುತೆರೆಯ ಜನಪ್ರಿಯ ‘ಗೀತಾ’ (Geetha) ಸೀರಿಯಲ್‌ನ ಖಳನಟಿಯಾಗಿ ಶರ್ಮಿತಾ ಗೌಡ (Sharmitha Gowda) ಕಾಣಿಸಿಕೊಂಡಿದ್ದಾರೆ. ಮಂಥರೆಯಾಗಿ ಕಿರುತೆರೆಯಲ್ಲಿ ಮೋಡಿ ಮಾಡ್ತಿದ್ದಾರೆ. ಸದ್ಯ ನಟಿ ವೆಕೇಷನ್ ಮೂಡ್‌ನಲ್ಲಿದ್ದಾರೆ. ಹೆಬ್ಬಾವನ್ನ ಭುಜದ ಮೇಲೆ ಹೊತ್ತುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಕುರಿತ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಗೀತಾ ಸೀರಿಯಲ್, ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಶರ್ಮಿತಾ ಗೌಡ ಸೈ ಎನಿಸಿಕೊಂಡಿದ್ದಾರೆ. ಆಗಾಗ ಶೂಟಿಂಗ್‌ಗೆ ಬ್ರೇಕ್ ಇದ್ದಾಗ ಹೊಸ ಜಾಗಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಆಗಾಗ ಬಿಕಿನಿ ಫೋಟೋ ಶೇರ್ ಮಾಡುತ್ತಾ, ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಸದ್ಯ ವಿದೇಶಕ್ಕೆ ನಟಿ ಹಾರಿದ್ದಾರೆ. ಇದನ್ನೂ ಓದಿ:ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ

ಇದೀಗ ಶರ್ಮಿತಾ ನೀಲಿ ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಹೆಬ್ಬಾವನ್ನು ಭುಜದ ಮೇಲೆ ಹೊತ್ತುಕೊಂಡಿರುವ ಫೋಟೊ ಹಂಚಿಕೊAಡಿದ್ದಾರೆ. ಹಾವು ಅಂದ್ರೆ ಜನ ಹೆದರುತ್ತಾರೆ. ಇನ್ನು ಹಾವನ್ನು ನೋಡಿದರೆ ಓಡಿ ಹೋಗುತ್ತಾರೆ. ಅದರಲ್ಲೂ ಹೆಬ್ಬಾವನ್ನು ನಟಿ ಶರ್ಮಿತಾ ಹೊತ್ತುಕೊಂಡಿರುವುದು ನೋಡಿ ಕೆಲವರು ಹುಬ್ಬೇರಿಸಿದ್ದಾರೆ. ಅಭಿಮಾನಿಗಳು ಬಹಳ ನೀವು ಬೋಲ್ಡ್, ಗ್ರೇಟ್, ಹುಷಾರು ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕಿರುತೆರೆ ಮಾತ್ರವಲ್ಲ ಸಿನಿಮಾಗಳಿಗೂ ನಟಿ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ನಟನೆಗೆ ಆದ್ಯತೆಯಿರುವ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಹಾಗೆಯೇ ಪರಭಾಷೆಯ ಸೀರಿಯಲ್‌ನಲ್ಲಿಯೂ ಕಾಣಿಸಿಕೊಳ್ತಿದ್ದಾರೆ.

Share This Article