ದರ್ಶನ್‌ ಪ್ರಕರಣದ ಬಗ್ಗೆ ಇತ್ತೀಚೆಗೆ ಗೊತ್ತಾಯ್ತು: ಶರ್ಮಿಳಾ ಮಾಂಡ್ರೆ

Public TV
1 Min Read

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ (Darshan) ಬಗ್ಗೆ ಮೊದಲ ಬಾರಿಗೆ ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿದ್ದಾರೆ. ದರ್ಶನ್ ಪ್ರಕರಣವನ್ನು ಕಾನೂನು ನಿರ್ಧಾರ ಮಾಡುತ್ತದೆ ಎಂದು ನಟಿ ಮಾತನಾಡಿದ್ದಾರೆ.‌ ಇದನ್ನೂ ಓದಿ:ಮಗಧೀರ ವಿಲನ್ ಈಗ ಹೀರೋ- ದೇವ್ ಗಿಲ್ ನಟನೆಯ ‘ಅಹೋ ವಿಕ್ರಮಾರ್ಕ’ ಚಿತ್ರದ ಸಾಂಗ್ ರಿಲೀಸ್

‘ನವಗ್ರಹ’ ಟೈಮ್‌ನಲ್ಲಿ ದರ್ಶನ್ ಅವರ ಜೊತೆ ಕೆಲಸ ಮಾಡಿರುವ ಅನುಭವ ಚೆನ್ನಾಗಿತ್ತು. ದರ್ಶನ್ ಅವರ ಫುಲ್ ಫ್ಯಾಮಿಲಿ ನನಗೆ ಚೆನ್ನಾಗಿ ಗೊತ್ತು. ‘ನವಗ್ರಹ’ (Navagraha) ಚಿತ್ರವನ್ನು ದರ್ಶನ್ ತಮ್ಮ ದಿನಕರ್ ಸರ್ ಡೈರೆಕ್ಷನ್ ಮಾಡುತ್ತಿದ್ದರು. ಸೆಟ್‌ನಲ್ಲಿ ದರ್ಶನ್ ಸರ್ ಚೆನ್ನಾಗಿರುತ್ತಿದ್ದರು. 2007ರಲ್ಲಿ ‘ನವಗ್ರಹ’ ಶೂಟಿಂಗ್ ಆಗಿತ್ತು ಎಂದಿದ್ದಾರೆ.

ಇನ್ನೂ ಈ ಪ್ರಕರಣದ ಬಗ್ಗೆ ನನಗೆ ವಿಷಯ ಗೊತ್ತಿರಲಿಲ್ಲ. ಆದರೆ ಇತ್ತೀಚೆಗೆ ಗೊತ್ತಾಯ್ತು. ಆದರೆ ಇದರ ಬಗ್ಗೆ ಕಾನೂನು ನಿರ್ಧರಿಸಲಿ ಎಂದಷ್ಟೇ ಶರ್ಮಿಳಾ ಮಾಂಡ್ರೆ ಮಾತನಾಡಿದ್ದಾರೆ.

Share This Article