ಹಣ ಕೊಟ್ಟಿದ್ದು ಅವ್ನು, ತೆಗೆದುಕೊಂಡಿದ್ದು ನಾನು – ಶರಣು ಸಲಗರ್ ಆಡಿಯೋ ವೈರಲ್, ದುಡ್ಡು ಪಡೆದು ಉಲ್ಟಾ ಹೊಡೆದ್ರಾ?

2 Min Read

ಬೀದರ್: 99 ಲಕ್ಷ ರೂ. ಸಾಲ ಪಡೆದು ಹಿಂತಿರುಗಿಸದ ಆರೋಪದ ಮೇಲೆ ಶಾಸಕ ಶರಣು ಸಲಗರ್ (Sharanu Salagar) ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ. ಹೀಗಾಗಿ ಉದ್ಯಮಿಯಿಂದ ಹಣ ಪಡೆದು ಶರಣು ಸಲಗರ್ ಉಲ್ಟಾ ಹೊಡೆದ್ರಾ ಎಂಬ ಅನುಮಾನ ಮೂಡಿದೆ.

ಉದ್ಯಮಿ ಸಂಜು ಸುಗುರೆ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಶರಣು ಸಲಗರ್ ನೀಡಿದ ಬೆನ್ನಲ್ಲೇ ಇದೀಗ ಆಡಿಯೋ ವೈರಲ್ ಆಗಿದೆ. ಸಾಲದ ಹಣ ವಾಪಸ್ ನೀಡದೇ ಇದ್ದಾಗ ಉದ್ಯಮಿ ಸಂಜು ಅವರ ಪತ್ನಿ ಹಾಗೂ ಮಗ ಸಲಗರ್ ಅವರ ಮನೆಗೆ ಹೋದಾಗ ನಡೆದ ಸಂಭಾಷಣೆ ಈ ಆಡಿಯೋ ಕೇಳಿಬಂದಿದೆ.ಇದನ್ನೂ ಓದಿ: 99 ಲಕ್ಷ ರೂ. ಸಾಲ ಹಿಂತಿರುಗಿಸದ ಆರೋಪ – ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR

ವೈರಲ್ ಆದ ಆಡಿಯೋದಲ್ಲಿ, ಶರಣು ಅವರು ಮಾತನಾಡುತ್ತಾ, ನೀವು ಈ ಬಗ್ಗೆ ಹೇಳುವ ಹಾಗಿಲ್ಲ, ಇದರಲ್ಲಿ ಮಧ್ಯೆ ಬರುವಂತಿಲ್ಲ. ದುಡ್ಡು ಕೊಟ್ಟಿದ್ದು ಅವನು, ತೆಗೆದುಕೊಂಡವನು ನಾನು ಎನ್ನುತ್ತಾರೆ. ಆಗ ಸಂಜು ಅವರ ಪತ್ನಿ ಮಾತನಾಡಿ, ನೀವು ಫೋನ್ ರಿಸೀವ್ ಮಾಡುತ್ತಿಲ್ಲ, ಅದಕ್ಕೆ ನಾವು ಕೇಳಲು ಬಂದಿದ್ದೇವೆ. ಇಲ್ಲದಿದ್ದರೆ ನಾವು ಬರುತ್ತಿರಲಿಲ್ಲ. ನೀವು ಜಮೀನು ಬರೆದುಕೊಳ್ಳಿ ಎಂದಿದ್ರಿ, ಆದರೆ ನಾವು ನಿಮ್ಮ ಮೇಲಿನ ನಂಬಿಕೆ ಹಾಗೂ ಭರವಸೆಯಿಂದ ಬೇಡ ಎಂದಿದ್ದೆವು ಎನ್ನುತ್ತಾರೆ. ಅದಕ್ಕೆ ಶರಣು ಅವರು ನಾನು ಯಾವಾಗಲು ಫೋನ್ ರಿಸೀವ್ ಮಾಡ್ತೀನಿ, ನಿಮ್ಮ ಬಳಿ ಬೇರೆ ಸಾಕ್ಷಿಗಳಿದ್ದರೆ ತೆಗೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಇದೀಗ ಶರಣು ಸಲಗರ್ ಅವರು ಮಾತನಾಡಿದ್ದ ಆಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಸಂಬಂಧ ಈಗಾಗಲೇ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಉದ್ಯಮಿ ಸಂಜು ಸುಗುರೆ ದೂರು ನೀಡಿದ್ದು, 2023ರ ಚುನಾವಣೆ ಸಂದರ್ಭದಲ್ಲಿ ಶಾಸಕ ಸಲಗರ್ ಚುನಾವಣೆ ವೆಚ್ಚಕ್ಕೆಂದು 99 ಲಕ್ಷ ರೂ. ಸಾಲ ಪಡೆದಿದ್ದಾರೆಂದು ಆರೋಪಿಸಿದ್ದಾರೆ.

ಶ್ಯೂರಿಟಿಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸೈನ್ ಮಾಡಿ ಶಾಸಕರು ಚೆಕ್ ನೀಡಿದ್ದು, ಎಷ್ಟೇ ಬಾರಿ ಹಣ ಕೇಳಿದರೂ ಶಾಸಕರು ಸಾಲ ಮರುಪಾವತಿಸಿಲ್ಲ. ಬಳಿಕ ಸೆ.14ರಂದು ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿ ಸಲಗರ್ ಚೆಕ್ ನೀಡಿದ್ದರು. ಅದೇ ಚೆಕ್ ಬ್ಯಾಂಕಿಗೆ ಹಾಕಲು ಖಾತ್ರಿಪಡಿಸಲು ಹೋದ ವೇಳೆ ಶಾಸಕರ ಮನೆಯಲ್ಲಿ ಗಲಾಟೆಯಾಗಿದ್ದು, ಚೆಕ್ ಬ್ಯಾಂಕಿಗೆ ಹಾಕುವುದಾಗಿ ಹೇಳಿದ್ದಕ್ಕಾಗಿ ಉದ್ಯಮಿ ಹೆಂಡತಿ ಹಾಗೂ ಮಗನಿಗೆ ಶಾಸಕ ಶರಣು ಸಲಗರ್ ಧಮ್ಕಿ ಹಾಕಿದ್ದಾರೆ ಎನ್ನಾಲಾಗಿದೆ. ಹಣ ವಾಪಸ್ ಕೊಡಿ ಎಂದು ಮನೆಗೆ ಹೋದರೆ ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸೆ.19ರಂದು ಶರಣು ಸಲಗರ್ ನೀಡಿದ ಚೆಕ್ ಬ್ಯಾಂಕಿಗೆ ಹಾಕಿದ್ರೆ ವಾಪಸ್ ಬಂದಿದೆ.

ಕರ್ನಾಟಕ ಬ್ಯಾಂಕ್‌ನಲ್ಲಿದ್ದ ಶಾಸಕರ ಖಾತೆ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ನೀಡಿದ್ದು, ಬಳಿಕ ಶಾಸಕರ ವಿರುದ್ಧ ಬೆಂಗಳೂರಿನ ಎಸಿಜೆಎಂ ಕೋರ್ಟ್‌ನಲ್ಲಿ ಉದ್ಯಮಿ ಸಂಜು ಸುಗುರೆ ದಾವೆ ಹೂಡಿದ್ದರು. ಕೋರ್ಟ್ ಸೂಚನೆ ಮೇರೆಗೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಸಕರ ವಿರುದ್ಧ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.ಇದನ್ನೂ ಓದಿ: ರಿವರ್ಸ್‌ ತೆಗೆಯುವಾಗ ಬಸ್‌ ಡಿಕ್ಕಿ; 4 ಮಂದಿ ಸಾವು – 9 ಜನರಿಗೆ ಗಾಯ

Share This Article