ಯತ್ನಾಳ್ ಉಚ್ಚಾಟನೆ ದುರಾದೃಷ್ಟಕರ: ಶರಣಪ್ರಕಾಶ್ ಪಾಟೀಲ್

Public TV
1 Min Read

– ಹಾಲಿನ ದರ ಏರಿಕೆಯ ಹೆಚ್ಚುವರಿ ಹಣ ರೈತರಿಗೆ ಸೇರುತ್ತೆ

ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿದ್ದಾರೆ. ಅವರನ್ನು ಉಚ್ಚಾಟನೆ ಮಾಡಿರುವುದು ದುರಾದೃಷ್ಟಕರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharanaprakash Patil) ಹೇಳಿದರು.

ಕಲಬುರಗಿಯಲ್ಲಿ (Kalaburagi) ನಡೆಸಿದ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ರಾಜಕಾರಣದಲ್ಲಿ ಉಚ್ಚಾಟನೆಯಂತಹ ಘಟನೆಗಳು ನಡೆಯಬಾರದು. ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್ ಅವರನ್ನು ಕರೆತರಲು ತಾವು ಸಾಮರ್ಥ್ಯ ಹೊಂದಿಲ್ಲ. ಅದಕ್ಕಾಗಿ ಬೇರೆ ವ್ಯಕ್ತಿಗಳು ಇದ್ದಾರೆ ಎಂದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಗೆ ನಾನು ಹೊಣೆ ಅಲ್ಲ: ವಿಜಯೇಂದ್ರ

ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ದರ ಏರಿಕೆಯಾದರೂ ಹೆಚ್ಚುವರಿ 4 ರೂ. ನೇರವಾಗಿ ರೈತರಿಗೆ ಹೋಗುತ್ತದೆ. ಈ ಹೆಚ್ಚಳವನ್ನು ಕರ್ನಾಟಕ ಹಾಲು ಮಹಾಮಂಡಳಿ (KMF) ಪಡೆದುಕೊಳ್ಳದೇ, ರೈತರಿಗೆ ಲಾಭವಾಗುವಂತೆ ಮಾಡಲಾಗಿದೆ. ಇತರ ರಾಜ್ಯಗಳ ಹಾಲಿನ ದರಗಳೊಂದಿಗೆ ಹೋಲಿಸಿದರೆ, ಉದಾಹರಣೆಗೆ ಗುಜರಾತ್‌ನಲ್ಲಿ (Gujarat), ನಮ್ಮ ರಾಜ್ಯದ ದರಗಳು ಸಮಾನವಾಗಿವೆ ಎಂದು ವಿವರಿಸಿದರು. ಇದನ್ನೂ ಓದಿ: ಯುಗಾದಿ ಬಳಿಕ ಸರ್ಕಾರದ ವಿರುದ್ಧ ಬಿಜೆಪಿ ಸರಣಿ ಹೋರಾಟ

Share This Article