IPL ಎಫೆಕ್ಟ್‌- ‘ಅವತಾರ ಪುರುಷ 2’ ಸಿನಿಮಾ ರಿಲೀಸ್‌ ಡೇಟ್‌ ಮುಂದೂಡಿದ ಚಿತ್ರತಂಡ

Public TV
1 Min Read

ಸ್ಯಾಂಡಲ್‌ವುಡ್ ನಟ ಶರಣ್ (Sharan), ಆಶಿಕಾ ರಂಗನಾಥ್ (Ashika Ranganath) ನಟನೆಯ ‘ಅವತಾರ ಪುರುಷ-2’ ರಿಲೀಸ್ ಡೇಟ್ ಮುಂದೂಡಲಾಗಿದೆ. ಐಪಿಎಲ್ ಎಫೆಕ್ಟ್‌ನಿಂದ ಅವತಾರ ಪುರುಷ- 2 (Avatara Purusha-2)  ಮುಂದಕ್ಕೆ ಹಾಕಲಾಗಿದೆ. ಹೊಸ ರಿಲೀಸ್‌ ಡೇಟ್‌ ಅನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ. ಇದನ್ನೂ ಓದಿ:ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌ನಲ್ಲಿ ‘ಬೃಂದಾವನ’ ನಟಿ- ದಂಗಾದ ಫ್ಯಾನ್ಸ್

‘ಅವತಾರ ಪುರುಷ’ 2ನೇ ಭಾಗ ಇದೇ ಮಾರ್ಚ್ 22ರಂದು ರಾಜ್ಯಾದ್ಯಂತ ತೆರೆಗೆ ಬರಲು ರೆಡಿಯಾಗಿತ್ತು. ಆದರೆ ಮಾರ್ಚ್ 22ರಿಂದ ಐಪಿಎಲ್ ಪಂದ್ಯ ಪ್ರಾರಂಭವಾಗುತ್ತಿದ್ದು, ಪ್ರೇಕ್ಷಕರು ಕೂಡ ಮ್ಯಾಚ್ ಕಡೆಗೆನೇ ವಾಲುತ್ತಾರೆ. ಸಿನಿಮಾಗಳು ಇಷ್ಟಪಡುವಂತೆಯೇ ಐಪಿಎಲ್‌ಗೂ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ.

ಐಪಿಎಲ್ ವೇಳೆಯೇ ಸಿನಿಮಾ ರಿಲೀಸ್ ಮಾಡಿದ್ರೆ, ಎಲ್ಲಿ ಚಿತ್ರಮಂದಿರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗತ್ತೋ ಎಂದು ಚಿತ್ರತಂಡ ಕೂಡ ರಿಲೀಸ್ ಡೇಟ್ ಮುಂದಕ್ಕೆ ಹಾಕಿದೆ. ಒಳ್ಳೆಯ ಸಿನಿಮಾ ಸೋಲಬಾರದು ಎಂಬುದು ಚಿತ್ರತಂಡದ ಅಭಿಪ್ರಾಯ.

 

View this post on Instagram

 

A post shared by Su Ni (@simplesuni)

ಐಪಿಎಲ್ ಮ್ಯಾಚ್ ಶುರುವಾದ್ರೆ ಸಾಕು, ಟಿಕೆಟ್‌ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕ್ರಿಕೆಟ್ ವೀಕ್ಷಿಸಲು ಅಭಿಮಾನಿಗಳು ಮುಗಿಬೀಳುತ್ತಾರೆ. ಹಾಗಾಗಿ ಅವತಾರ ಪುರುಷ 2 ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಮುನಿಸು ಮರೆತು ಸಿನಿಮಾಗಾಗಿ ಒಂದಾದ ಮಾಜಿ ಪ್ರೇಮಿಗಳು

ನಟ ಶರಣ್- ನಟಿ ಆಶಿಕಾ ರಂಗನಾಥ್ ಜೋಡಿ, ಮತ್ತೆ ಶ್ರೀನಗರ ಕಿಟ್ಟಿಯ ಮಂತ್ರವಾದಿಯ ಪಾತ್ರ ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಶ್ರೀನಗರ ಕಿಟ್ಟಿ ಪಾತ್ರ ಮೊದಲ ಭಾಗಕ್ಕಿಂತ ಅವತಾರ ಪುರುಷ ಎರಡನೇ ಭಾಗದಲ್ಲಿ ಇನ್ನಷ್ಟು ಭಯಂಕರವಾಗಿಯೇ ಮೂಡಿ ಬಂದಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ‘ಅವತಾರ ಪುರುಷ’ ಮೊದಲ ಭಾಗವನ್ನು ಇಷ್ಟಪಟ್ಟಂತೆ ಕೂಡ ಎರಡನೇ ಭಾಗವನ್ನು ಮೆಚ್ಚುಗೆ ಸೂಚಿಸಬಹುದು. ರಿಲೀಸ್‌ ಆದ್ಮೇಲೆ ಶರಣ್‌ ಸಿನಿಮಾ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂದು ಕಾದುನೋಡಬೇಕಿದೆ.

Share This Article